ನಾಪೋಕ್ಲು, ಜೂ. 30: ಸ್ಥಳೀಯ ಲಯನ್ಸ್ ಕ್ಲಬ್‍ನ ನೂತನ ಅಧ್ಯಕ್ಷರಾಗಿ ಮುಕ್ಕಾಟಿರ ವಿನಯ್, ಕಾರ್ಯದರ್ಶಿಯಾಗಿ ಕನ್ನಂಬೀರ ಸಿ.ತಿಮ್ಮಯ್ಯ ಖಜಾಂಚಿಯಾಗಿ ಬೊಳ್ಳಂಡ ಎಸ್. ಬಿದ್ದಪ್ಪ ಆಯ್ಕೆಯಾಗಿದ್ದಾರೆ. ಇಲ್ಲಿನ ಕೊಡವ ಸಮಾಜದಲ್ಲಿ ಜರುಗಿದ ಪದಗ್ರಹಣ ಕಾರ್ಯಕ್ರಮದಲ್ಲಿ ಪದಗ್ರಹಣ ಮಾಡಲಾಯಿತು. ಲಯನ್ಸ್ ಸಂಸ್ಥೆಯ ಉಪರಾಜ್ಯಪಾಲ ರೋನಾಲ್ಡ್ ಗೋಮ್ಸ್ ಪ್ರಮಾಣ ವಚನ ಬೋಧಿಸಿ, ಶುಭಹಾರೈಸಿದರು. ನಿರ್ಗಮಿತ ಅಧ್ಯಕ್ಷ ಡಾ. ಕೋಟೇರ ಪಂಚಮ್‍ತಿಮ್ಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಂತೀಯ ಅಧ್ಯಕ್ಷ ಕೇಟೋಳಿರ ರತ್ನಚರ್ಮಣ ವಲಯ ಅಧ್ಯಕ್ಷ ಅಚ್ಚಯ್ಯ, ಪಿ.ಪಿ. ಸೋಮಣ್ಣ, ರಾಜ್ಯಪಾಲರ ಪ್ರಾಂತೀಯ ಪ್ರತಿನಿಧಿಗಳಾದ ಕೆ.ಕೆ. ಅಯ್ಯಪ್ಪ, ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ವಸಂತಶೆಟ್ಟಿ, ನಿರ್ಗಮಿತ ಖಜಾಂಚಿ ಕುಂಚೆಟ್ಟೀರ ರೇಷ್ಮಾಉತ್ತಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.