ಸೋಮವಾರಪೇಟೆ, ಜೂ. 30: ಇಲ್ಲಿನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ದ್ವಿತೀಯ ದರ್ಜೆ ಸಹಾಯಕರಾಗಿದ್ದ ಬಿ.ಬಿ. ಶಿವಪ್ಪ ಹಾಗು ಡಿ.ದರ್ಜೆ ನೌಕರರಾದ ವಿಜಯಲಕ್ಷ್ಮೀ ಅವರು ನಿವೃತ್ತಿ ಹೊಂದಿದ್ದು, ಆಸ್ಪತ್ರೆಯ ಸಿಬ್ಬಂದಿಗಳು ಬೀಳ್ಕೊಟ್ಟರು.

ಆಸ್ಪತ್ರೆ ಆವರಣದಲ್ಲಿ ನಡೆದ ಸಮಾರಂಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ರವಿಕುಮಾರ್, ಆಸ್ಪತ್ರೆಯ ತಜ್ಞ ವೈದ್ಯರುಗಳಾದ ಶರತ್‍ಬಾಬು, ಶಿವಪ್ರಸಾದ್, ದೇವಿಕಾ, ಆಸ್ಪತ್ರೆಯ ಅಧೀಕ್ಷಕಿ ಮಂಗಳಗೌರಿ ಅವರುಗಳು ನಿವೃತ್ತಿ ಹೊಂದಿದ ನೌಕರರ ಸೇವೆಯನ್ನು ಸ್ಮರಿಸಿದರು. ದಾದಿಯರಾದ ಭಾನುಪ್ರಿಯ ಸ್ವಾಗತಿಸಿ, ಡಿ.ಪಿ. ಮೀನಾಕ್ಷಿ ಕಾರ್ಯಕ್ರಮ ನಿರ್ವಹಿಸಿದರು.