ಗೋಣಿಕೊಪ್ಪ ವರದಿ, ಜೂ. 25: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಎತ್ತು ಸಾವನಪ್ಪಿರುವ ಘಟನೆ ನಲ್ಲೂರು ಗ್ರಾಮದಲ್ಲಿ ನಡೆದಿದೆ.

ಅಲ್ಲಿನ ಸೋಮೇಂಗಡ ಗಣೇಶ್ ತಿಮ್ಮಯ್ಯ ಎಂಬವರಿಗೆ ಸೇರಿದ ವಿದೇಶಿ ತಳಿಯ ಎತ್ತು ಹೊಳೆ ಬದಿಯಲ್ಲಿ ಮೇಯಲು ತೆರಳಿದ್ದಾಗ ವಿದ್ಯುತ್ ತಂತಿಯನ್ನು ತುಳಿದ ಪರಿಣಾಮ ಎತ್ತು ಸ್ಥಳದಲ್ಲಿಯೇ ಸಾವನಪ್ಪಿದೆ. 11 ಕೆ.ವಿ ವಿದ್ಯುತ್ ತಂತಿ ಮಳೆ, ಗಾಳಿಗೆ ತುಂಡಾಗಿ ಬಿದ್ದಿತ್ತು. ಇದರಿಂದ ಅನಾಹುತ ನಡೆದಿದೆ. ಸ್ಥಳಕ್ಕೆ ಪೊನ್ನಂಪೇಟೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದರು. ರೈತ ಸಂಘದ ಪದಾಧಿಕಾರಿಗಳು ಇದ್ದರು.