ಮಡಿಕೇರಿ, ಜೂ. 24: ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಟಕೇರಿಯಲ್ಲಿ ಆಟೋ ಹಾಗೂ ಕಾರಿನ ನಡುವೆ ಅವಘಡ ಸಂಭವಿಸಿ, ಆಟೋ ಚಾಲಕ ಗಾಯಗೊಂಡಿರುವ ಘಟನೆ ನಡೆದಿದೆ.

ಮಂಗಳೂರಿನಿಂದ ಮಡಿಕೇರಿಯತ್ತ ಆಗಮಿಸುತ್ತಿದ್ದ ಕಾರು (ಕೆಎ19 ಎಂಸಿ 5862) ಹಾಗೂ ಆಟೋ (ಕೆಎ12 ಬಿ4717) ಕ್ಕೆ ಡಿಕ್ಕಿಯಾಗಿದ್ದು, ಆಟೋ ಚಾಲಕ ಚಂದ್ರಶೇಖರನ ಭುಜದ ಭಾಗಕ್ಕೆ ಪೆಟ್ಟಾಗಿದೆ. ಆಟೋದಲ್ಲಿ ಪ್ರಯಾಣಿಕರೊಬ್ಬರಿದ್ದು ಅವರು ಅಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.