ಸುಂಟಿಕೊಪ್ಪ, ಜೂ. 25: ಇಲ್ಲಿನ ಹೊಸ ಬಡಾವಣೆಯ ನಿವಾಸಿ ಎ.ಆರ್. ಅಚ್ಚಮ್ಮಯ್ಯ (81) ಅವರು ಅನಾರೋಗ್ಯ ದಿಂದ ಮೈಸೂರಿನ ಅಪೋಲೊ ಆಸ್ಪತ್ರೆಯಲ್ಲಿ ತಾ. 25ರಂದು ನಿಧನ ಹೊಂದಿದರು. ಮೃತರು ಪತ್ನಿ ಮೂವರು ಪುತ್ರರನ್ನು ಅಗಲಿದ್ದಾರೆ. ಇವರು ಲಯನ್ಸ್ ಪದಾಧಿಕಾರಿಯಾಗಿ, ಕನ್ನಡ ಸಾಹಿತ್ಯ ಪರಿಷತ್ ಹಿರಿಯ ಸದಸ್ಯರಾಗಿ, ಚೇಂಬರ್ ಆಫ್ ಕಾಮರ್ಸ್‍ನ ಮಾಜಿ ಪದಾಧಿಕಾರಿಯಾಗಿ, ಚೇಂಬರ್ ಟ್ರಸ್ಟ್‍ನ ಮಾಜಿ ಪದಾಧಿಕಾರಿಯಾಗಿ, ಜಿಲ್ಲಾ ನಿರ್ದೇಶಕರಾಗಿ, ಗೌರಿ ಗಣೇಶ ಉತ್ಸವ ಉಪಸಮಿತಿ ಮಾಜಿ ಅಧ್ಯಕ್ಷರಾಗಿ, ಹಿರಿಯ ನಾಗರಿಕರ ಜಿಲ್ಲಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಮೃತರ ಅಂತ್ಯಕ್ರಿಯೆ ತಾ. 26ರಂದು (ಇಂದು) ಮಾದಾಪುರ ರಸ್ತೆಯ ಹಿಂದು ಮುಕ್ತಿ ಧಾಮದಲ್ಲಿ ನೆÀರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.