*ಗೋಣಿಕೊಪ್ಪಲು, ಜೂ. 20: ಪೆÇನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮ, ಧರ್ಮಸ್ಥಳ ಮಂಜುನಾಥ ಪ್ರಕೃತಿ ಚಿಕಿತ್ಸಾ ಯೋಗ ಕಾಲೇಜು ಸರ್ಕಾರಿ ಪದವಿಪೂರ್ವ ಕಾಲೇಜು ಮತ್ತು ಪ್ರೌಢಶಾಲಾ ವತಿಯಿಂದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ತಾ. 21 ರಂದು (ಇಂದು) ಆಚರಿಸಲಾಗುವದು ಎಂದು ರಾಮಕೃಷ್ಣ ಆಶ್ರಮದ ಅಧ್ಯಕ್ಷ ಬೋಧ ಸ್ವರೂಪನಂದಾಜೀ ತಿಳಿಸಿದ್ದಾರೆ. ಬೆಳಿಗ್ಗೆ 9 ಗಂಟೆಯಿಂದ ಆಶ್ರಮದ ಸಭಾಂಗಣದಲ್ಲಿ ಯೋಗ ದಿನಾಚರಣೆ ಆಚರಿಸಲಾಗುತ್ತದೆ. ಪ್ರೌಢಶಾಲೆ, ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಭಾಗವಹಿಸಲಿದ್ದಾರೆ. ಯೋಗ ಗುರುಗಳಾಗಿ ಧರ್ಮಸ್ಥಳ ಮಂಜುನಾಥ ಪ್ರಕೃತಿ ಚಿಕಿತ್ಸಾ ಯೋಗ ಕಾಲೇಜಿನ ಯೋಗ ಶಿಕ್ಷಕರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಆಶ್ರಮದಲ್ಲಿ ಪ್ರತಿ ನಿತ್ಯ ಬೆಳಿಗ್ಗೆ 6 ರಿಂದ 7, ಸಂಜೆ 5.30 ರಿಂದ 6.30 ರ ತನಕ ಯೋಗ ಶಿಕ್ಷಣ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.