ನಾಪೆÇೀಕ್ಲು, ಜೂ. 18: ಸಮೀಪದ ಕಕ್ಕಬ್ಬೆ ಯವಕಪಾಡಿ ಗ್ರಾಮದ ಹನಿವ್ಯಾಲ್ಯೂ ಹೋಂ ಸ್ಟೇ ಯಲ್ಲಿ ಕಾರ್ಮಿಕಳಾಗಿ ದುಡಿಯುತ್ತಿದ್ದ ಅಡಿಯರ ಕಾಲÉೂನಿ ಬೋಳ್ಕ ಎಂಬವರ ಪತ್ನಿ ಚುಬ್ಬಿ ಕೆಲಸ ಮುಗಿಸಿಕೊಂಡು ತನ್ನ ಮನೆಗೆ ತೆರಳುತ್ತಿದ್ದ ಸಂದರ್ಭ ಒಂಟಿ ಸಲಗವೊಂದು ದಿಢೀರ್ ಈಕೆಯ ಮೇಲೆರಗಿದೆ. ಸೊಂಡಿಲಿನಿಂದ ಆಕೆಯನ್ನು ಹಿಡಿಯಲು ಪ್ರಯತ್ನಿಸುತ್ತಿದ್ದು, ಕೈಯಲ್ಲಿದ್ದ ಪ್ಲಾಸ್ಟಿಕ್ ಬ್ಯಾಗ್ ಆನೆಯ ಸೊಂಡಿಲಿಗೆ ಸಿಲುಕಿದೆ ಮಾತ್ರವಲ್ಲದೆ, ಆನೆಯು ಈಕೆಯ ಕೈಯನ್ನು ತಿರುವಿದ್ದು, ಈ ಸಂದರ್ಭ ಕೂಗು ಕೇಳಿ ಜನರು ಧಾವಿಸಿದ್ದರಿಂದ ಆನೆಯು ಅಲ್ಲಿಂದ ಓಡಿಹೋಗಿದೆ. ಚುಬ್ಬಿಯ ಕೈಮುರಿದಿದ್ದು, ಈಕೆಯನ್ನು ಪ್ರಥಮ ಚಿಕಿತ್ಸೆ ಬಳಿಕ ಮಡಿಕೇರಿಯ ಜಿಲ್ಲಾಸ್ವತ್ರೆಗೆ ಸೇರಿಸಲಾಗಿದೆ. ಈ ವಿಭಾಗದಲ್ಲಿ ನಿರಂತರವಾಗಿ ಕಾಡಾನೆಗಳು ಧಾಳಿ ನಡೆಸಿ ಜನರಿಗೂ ಮತ್ತು ಬೆಳೆಗಳಿಗೂ ಹಾನಿ ಆಗಿದ್ದು ಅರಣ್ಯ ಇಲಾಖೆ ಕೂಡಲೇ ಆನೆಯನ್ನು ಇಲ್ಲಿಂದ ಓಡಿಸಲು ಕ್ರಮ ಕೈಗೊಂಡು ಆನೆ ಧಾಳಿಯಿಂದ ಕೈಮುರಿದುಕೊಂಡಿರುವ ಅಡಿಯರ ಚುಬ್ಬಿಗೆ ಸೂಕ್ತ ಪರಿಹಾರ ನೀಡಬೇಕೆಂದು ಕಕ್ಕಬ್ಬೆ ಗ್ರಾಮ ಪಂಚಾಯತ್ ಸದಸ್ಯರಾದ ಯಂ. ರಮೇಶ್, ಹಾಗೂ ಚಂಡೀರ ಜಗದೀಶ್, ಪಾಂಡಂಡ ನರೇಶ್, ಸರಕಾರವನ್ನು ಒತ್ತಾಯಿಸಿದ್ದಾರೆ.

ಕಕ್ಕಬ್ಬೆಯ ಕಣಿಯರ ನಾಣಯ್ಯನವರ ತೋಟಕ್ಕೆ ಸುಮಾರು 4 ಕಾಡಾನೆಗಳು ಧಾಳಿ ನಡೆಸಿ ತೋಟದಲ್ಲಿರುವ ಬಾಳೆ, ಕಾಫಿ ಗಿಡಗಳನ್ನು ನಾಶ ಪಡಿಸಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.

-ದುಗ್ಗಳ