ಕುಶಾಲನಗರ, ಜೂ 14: ಕುಶಾಲನಗರ ಪಟ್ಟಣದ ಬಡಾವಣೆಯೊಂದರಲ್ಲಿ ಡೆಂಗ್ಯು ಜ್ವರ ಬಾಧೆ ವಿಪರೀತವಾಗಿ ಬಾಧಿಸತೊಡಗಿದೆ. ಪಟ್ಟಣದ ರಾಧಾಕೃಷ್ಣ ಬಡಾವಣೆಯಲ್ಲಿ ಹಲವು ಮಂದಿ ಡೆಂಗ್ಯು ಜ್ವರ ಬಾಧಿತರಾಗಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಸೇರಿದಂತೆ ಬಡಾವಣೆಯ ಮಹಿಳೆಯರು, ಕೆಲವು ಪೊಲೀಸ್ ಸಿಬ್ಬಂದಿಗಳು ಜ್ವರ ಪೀಡಿತರಾಗಿ ಚಿಕಿತ್ಸೆಗೆ ಒಳಗಾಗಿದ್ದಾರೆ. ಈ ಹಿಂದೆಯೂ ಈ ವ್ಯಾಪ್ತಿಯಲ್ಲಿ ಡೆಂಗ್ಯು ಜ್ವರ ಕಂಡುಬಂದಿತ್ತು.