ಸೋಮವಾರಪೇಟೆ, ಜೂ. 13: ಎಸ್‍ಎಸ್‍ಎಫ್ ಹೊಸತೋಟ ಘಟಕದ ವತಿಯಿಂದ ಅಲ್ಲಿನ ಶಾದಿ ಮಹಲ್‍ನಲ್ಲಿ ರಂಜಾನ್ ಅಂಗವಾಗಿ ಇಫ್ತಾರ್ ಕೂಟ ಆಯೋಜಿಸಲಾಗಿತ್ತು. ಸ್ಥಳೀಯ ಖತೀಬರಾದ ಅಬೂಬಕ್ಕರ್ ಮದನಿ, ಜಮಾಅತ್ ಅಧ್ಯಕ್ಷ ಸೈದು ಹಾಜಿ, ಎಸ್‍ಎಸ್‍ಎಫ್ ಮಾಜಿ ಜಿಲ್ಲಾ ಕಾರ್ಯದರ್ಶಿ ಝೈನುದ್ದೀನ್, ಎಸ್‍ವೈಎಸ್ ಕಾರ್ಯದರ್ಶಿ ಶಿಯಾಬ್, ಘಟಕದ ಅಧ್ಯಕ್ಷ ಶಿಹಾಬ್ ತಂಙಳ್, ಪದಾಧಿಕಾರಿ ಉನೈಸ್, ಶರೀಫ್ ಸೇರಿದಂತೆ ಇತರರು ಭಾಗವಹಿಸಿದ್ದರು.