ಕೊಳಕೇರಿ: ಕೊಳಕೇರಿಯಲ್ಲಿ ಕುಪ್ಪೋಟ್ ಹೊಳೆ ತುಂಬಿದ್ದು, ಸೇತುವೆ ಮೇಲೆ ನೀರು ಹರಿಯುತ್ತಿದೆ.

ಚಿತ್ರ: ಉನೈಸ್ ಕೊಳಕೇರಿ

ಪಾಲೂರು: ಪಾಲೂರಿನಲ್ಲಿ ನಾಲ್ಕು ವಿದ್ಯುತ್ ಕಂಬ ಮುರಿದು ನಾಲ್ಕು ದಿನಗಳಾಗಿವೆ. ಇತ್ತ ಯಾರೂ ತಲೆ ಹಾಕಿಲ್ಲ.

-ರೀನಾ ಜಗನ್ನಾಥ್

*ದಕ್ಷಿಣ ಕೊಡಗಿನ ಕುಮಟೂರು-ಬಾಡಗ-ಕರಿಚಿಮಾನಿಯಲ್ಲಿ ಹರಿಯುತ್ತಿರುವ ರಾಮತೀರ್ಥ ನದಿ ಪ್ರವಾಹದಿಂದಾಗಿ ಸಂಪರ್ಕ ಸೇತುವೆ ಮುಳುಗಡೆಗೊಂಡಿದೆ.

ಚಿತ್ರ: ನಿತಿನ್ ನಂಜಪ್ಪ, ಕೆ. ಬಾಡಗ

*ಮದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಟಕೇರಿ ಹಾಗೂ ಎರಡನೇ ಮೊಣ್ಣಂಗೇರಿಯಲ್ಲಿ ವಿದ್ಯುತ್ ಇಲ್ಲದೆ 4 ದಿನಗಳಾಗಿವೆ. ಗ್ರಾಮಸ್ಥರೇ ಮಾರ್ಗ ದುರಸ್ತಿಕಾರ್ಯ ಮಾಡಿಕೊಟ್ಟರೂ ಸೆಸ್ಕ್ ಅಧಿಕಾರಿಗಳು ಸಂಪರ್ಕ ನೀಡುತ್ತಿಲ್ಲ. ಕೇವಲ ಭರವಸೆ ಮಾತ್ರ ನೀಡಿ ಸತಾಯಿಸುತ್ತಿದ್ದಾರೆ.

-ಜೀಪ್ ಹರೀಶ್, ಕಾಟಕೇರಿ

ಇನ್ನೂ ಹಲವಾರು ಮಂದಿ ಕರೆ ಮಾಡಿ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಮನೆ ಬಳಿಯ ಖಾಸಗಿ ತೋಟದಲ್ಲಿರುವ ಮರವೊಂದು ಮನೆಯ ಮೇಲೆ ಬೀಳುವ ಸ್ಥಿತಿಯಲ್ಲಿದ್ದು, ತೆರವುಗೊಳಿಸಲು ಸಂಬಂಧಿಸಿದ ತೋಟದವರಿಗೆ ಮನವಿ ಮಾಡುವಂತೆ ಪಾಲಿಬೆಟ್ಟ, ಹುಂಡಿಯ ಲಾವಣ್ಯ ಅವರು ಕೋರಿದ್ದಾರೆ.

*ಮಡಿಕೇರಿ ಸುಬ್ರಹ್ಮಣ್ಯನಗರದ ನಿವಾಸಿಯೋರ್ವರ ಮನೆ ಸನಿಹ ಭೂಕುಸಿದಿದ್ದು, ನಿಮ್ಮದು ಯಾವ ಡಿಪಾರ್ಟ್‍ಮೆಂಟ್ ಎಂದು ಕೇಳಿದ್ದರು.

*ಮೈತಾಡಿಯ ಸೀತಮ್ಮ ಅವರು ನಮ್ಮ ಗದ್ದೆಗೆ ದೊಡ್ಡ ಮರ ಬಿದ್ದಿದ್ದು, ಗದ್ದೆಗೆ ಮರ ಬಿದ್ದರೆ ಪರಿಹಾರ ಕೊಡುತ್ತೀರಾ ಎಂದು ಕೇಳಿದ್ದಾರೆ.

*ಇನ್ನು ಕೆಲವರು ಬೆಳ್ಳಂಬೆಳಿಗ್ಗೆ ಕರೆ ಮಾಡಿ ಶಾಲೆಗೆ ರಜೆ ಇದೆಯಾ ಎಂದು ನಿದ್ದೆಗೆಡಿಸಿದವರೂ ಇದ್ದರು...!

ಮಳೆಯಿಂದಾದ ತೊಂದರೆ ಬಗ್ಗೆ ವ್ಯಾಟ್ಸ್‍ಪ್ ಮೂಲಕ ಮಾಹಿತಿ ನೀಡುವಂತೆ ತಾ. 12ರ ಪತ್ರಿಕೆ ಮೂಲಕ ಕೋರಲಾಗಿತ್ತು. ಬೆಳಿಗ್ಗೆ 5.30 ರಿಂದ ರಜೆ ಮಾಹಿತಿ ಬಯಸಿ ಆರಂಭವಾದ ಕರೆ ಹಾಗೂ ಸಂದೇಶಗಳು ರಾತ್ರಿವರೆಗೂ ಮುಂದುವರೆದವು. ಜನ ನೀಡಿದ ಮಾಹಿತಿಯ ವಿವರ ಕೆಳಗಿನಂತಿದೆ.

-ಸಂಪಾದಕ

ಮತ್ತೂರು: ಲಕ್ಷ್ಮಣತೀರ್ಥ ನದಿ ನಿಟ್ಟೂರುವಿನಲ್ಲಿ ಉಕ್ಕಿ ಹರಿಯುತ್ತಿದ್ದು, ಮತ್ತೂರು ಸೇತುವೆ ಜಲಾವೃತಗೊಂಡಿದೆ.

ಟಿ. ಶೆಟ್ಟಿಗೇರಿ: ಟಿ. ಶೆಟ್ಟಿಗೇರಿಯಲ್ಲಿ ಗದ್ದೆಗಳು ಜಲಾವೃತಗೊಂಡಿದ್ದು, ಸುಮಾರು 4 ಅಡಿಯಷ್ಟು ನೀರು ನಿಂತು ಸಮಸ್ಯೆಯಾಗಿದೆ.

-ಚೆಟ್ಟಂಡ ಚರ್ಮಣ

ಕುಟ್ಟಂದಿ: ಕುಟ್ಟಂದಿ ಗ್ರಾಮದಲ್ಲಿ ಚಂದುರ ಗಣಪತಿ ಅವರಿಗೆ ಸೇರಿದ ಕೊಟ್ಟಿಗೆ ಕುಸಿದು ಬಿದ್ದಿರುವದು.

-ಗಣಪತಿ

ಬಿ. ಶೆಟ್ಟಿಗೇರಿ: ಬಿ. ಶೆಟ್ಟಿಗೇರಿ ವಿಭಾಗದಲ್ಲಿ ತಾ. 12 ರಂದು ಬೆಳಿಗ್ಗೆ 8.30ರ ತನಕ ಕಳೆದ 24 ಗಂಟೆಗಳಲ್ಲಿ 7.48 ಇಂಚು ಮಳೆ ಸುರಿದಿದೆ. ಭಾರೀ ಮಳೆಯಿಂದ ಕುರುಡು ಪೊಳೆ ಪ್ರವಾಹದಿಂದ ಉಂಟಾಗಿರುವ ಹಾನಿ.

-ಕಾಳೇಂಗಡ ತರುಣ್

ಹುದಿಕೇರಿ: ಹುದಿಕೇರಿಯಲ್ಲಿ ತೀವ್ರ ಮಳೆಯಿಂದಾಗಿ ಮನೆಯ ಹಿಂಭಾಗದಲ್ಲಿ ಕುಸಿತದಿಂದ ಹಾನಿಯಾಗಿದ್ದು, ಇದು ಇನ್ನೂ ಮುಂದುವರಿಯುತ್ತಿದೆ.

-ಪ್ರವೀಣ್ ಜಿ.ಎ.

ಚೆನ್ನಂಗಿ ಗುಡ್ಲೂರು: ಭಾರೀ ಮಳೆಯಿಂದಾಗಿ ದನದ ಕೊಟ್ಟಿಗೆಯ ಸಿಮೆಂಟ್ ಶೀಟ್ ಹಾನಿಗೊಳಗಾಗಿದೆ.

-ಎಂ.ಪಿ. ಚಂಗಪ್ಪ

ನಿಟ್ಟೂರು ಬಾಳೆಲೆ: ನಿಟ್ಟೂರು ಬಾಳೆಲೆಯಲ್ಲಿ ಲಕ್ಷ್ಮಣ ತೀರ್ಥ ನದಿ ನೀರು ಗದ್ದೆಯನ್ನು ಆವರಿಸಿದೆ. ರಸ್ತೆ ಎತ್ತರಿಸಿದ ಭಾಗಕ್ಕೆ ತಡೆಗೋಡೆ ಕಟ್ಟುವ ಕೆಲಸ ಪೂರ್ಣವಾಗಿಲ್ಲ. ತಡೆಗೋಡೆ ಇಲ್ಲದ ಜಾಗದಲ್ಲಿ ಬರೆ ಜಾರಿದರೆ ಸಮಸ್ಯೆಯಾಗುತ್ತದೆ. -ಪ್ರಭು

ಹಳ್ಳಿಗಟ್ಟು: ಹಳ್ಳಿಗಟ್ಟುವಿನಲ್ಲಿ 50 ಅಡಿ ಅಗಲ ಹಾಗೂ 10 ಅಡಿ ಎತ್ತರದ ತಡೆಗೋಡೆ ಕುಸಿದು ಬಿದ್ದು ಹಾನಿಗೀಡಾಗಿರುವದು.

-ಸಿ.ಟಿ. ಕರುಂಬಯ್ಯ

ಚೆಯ್ಯಂಡಾಣೆ: ಚೆಯ್ಯಂಡಾಣೆ ನಿವಾಸಿ ಎ.ಕೆ. ಉದಯ ಅವರ ಮನೆಯ ಹಿಂಭಾಗ ಭೂಕುಸಿತ ಉಂಟಾಗಿ ನಷ್ಟ ಸಂಭವಿಸಿದೆ.

ಚಿತ್ರ: ಎ.ಕೆ. ಉದಯ

ಕಾರುಗುಂದ: ಕಡಿಯತ್ತೂರು-ಕಾರುಗುಂದ ಬಳಿ ಕಾವೇರಿ ನದಿ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ನಡೆದಾಡಲು ಕಷ್ಟವಾಗುತ್ತಿದೆ.

ಚಿತ್ರ: ಜೀವನ್