ಮಕ್ಕಳು - ಶಿಕ್ಷಕರಿಂದ ಸ್ವಚ್ಛತೆ

ಸುಂಟಿಕೊಪ್ಪ, ಜೂ. 13: ಒಂದೆಡೆ ಮಳೆ ಗಾಳಿಯ ಆರ್ಭಟ ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ತೆರಳಲು ಪರದಾಡುವಂತಾಗಿದ್ದರೆ, ಮತ್ತೊಂದೆಡೆ ಶಾಲೆಗೆ ಬಂದರೆ ಬೀಡಾಡಿ ದನಗಳು ಸಗಣಿ, ಮೂತ್ರ ಶುಚಿಗೊಳಿಸುವ ಕಾಯಕದಿಂದ ಶಿಕ್ಷಕರು ಮಕ್ಕಳು ಹೈರಾಣಾಗಿದ್ದಾರೆ.

7ನೇ ಹೊಸಕೋಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶನಿವಾರದಿಂದ ಸೋಮವಾರದವರೆಗೆ ರಜೆಯಿತ್ತು ತಾ.12 ರಂದು ಶಾಲೆಗೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಬಂದಾಗ ಶಾಲೆಯ ಆವರಣದಲ್ಲಿ ಬೀಡಾಡಿ ದನಗಳು ಮಳೆ ಚಳಿಗೆ ಬಂದು ಆಶ್ರಯ ಪಡೆದುದಲ್ಲದೆ ಮೂತ್ರ, ಸಗಣಿ ವಿಸರ್ಜಿಸಿ ಶಾಲೆಯ ವಾತಾವರಣವನ್ನು ಆಶುಚಿತ್ವದಿಂದ ಕೂಡಿತ್ತು. ಬಳಿಕ ಶಾಲಾ ಮಕ್ಕಳು ಸಗಣಿ ಬಾಚಿ ನೀರು ಹಾಕಿ ಶಾಲೆಯ ಆವರಣವನ್ನು ಶುಚಿಗೊಳಿಸಿ ಶಾಲೆಯ ಪಾಠ ಪ್ರವಚನದಲ್ಲಿ ಶಿಕ್ಷಕರು ತೊಡಗಿಸಿಕೊಂಡರು.