ಸೋಮವಾರಪೇಟೆ, ಜೂ. 13: ಕಳೆದ 2011ರ ಜನಗಣತಿ ಹಾಗೂ 2018ರ ಮೇ ತನಕದ ಮತದಾರರ ಪಟ್ಟಿಯ ಪರಿಷ್ಕರಣೆಯಂತೆ ಸೋಮವಾರಪೇಟೆ ಪ.ಪಂ.ನ 11 ಸ್ಥಾನಗಳಿಗೆ ವಾರ್ಡ್ ಪ್ರಕಾರ ಮೀಸಲಾತಿಯನ್ನು ಪ.ಪಂ. ನೋಟೀಸ್ ಬೋರ್ಡಿನಲ್ಲಿ ಪ್ರಕಟಿಸಲಾಗಿದೆ. ಮೀಸಲಾತಿ ಪ್ರಕಟಣೆಯಂತೆ ಸಲಹೆ, ಆಕ್ಷೇಪಣೆ ಸಲ್ಲಿಸುವವರು ತಾ. 21ರ ಸಂಜೆ 5 ಗಂಟೆಯೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಮುಖ್ಯಾಧಿಕಾರಿ ನಾಚಪ್ಪ ತಿಳಿಸಿದ್ದಾರೆ.

ಕರಡು ಪಟ್ಟಿ ಸಿದ್ಧ: ಪ.ಪಂ. ಚುನಾವಣೆಗಾಗಿ ಮತದಾರರ ಪರಿಷ್ಕøತ ಕರಡು ಪ್ರತಿ ಸಿದ್ಧವಾಗಿದ್ದು, ಇದನ್ನೂ ಸಹ ನೋಟೀಸ್ ಬೋರ್ಡ್‍ನಲ್ಲಿ ಪ್ರಕಟಿಸಲಾಗಿದೆ. ಈ ಬಗ್ಗೆ ಆಕ್ಷೇಪಣೆ ಸಲ್ಲಿಸುವವರು ತಾ. 17ರ ಒಳಗೆ ಪ.ಪಂ. ಕಚೇರಿಗೆ ಸಲ್ಲಿಸಬಹುದು ಎಂದು ನಾಚಪ್ಪ ತಿಳಿಸಿದ್ದಾರೆ.