ಮಡಿಕೇರಿ, ಜೂ. 13: ಕ್ಲೋಸ್ಬರ್ನ್ ಶಾಲೆ ಶಿಥಿಲಾವಸ್ಥೆಗೆ ತಲಪಿದ್ದು, ಛಾವಣಿ ಇಂದೋ-ನಾಳೆಯೋ ಬೀಳುವ ಹಂತ ತಲಪಿದೆ. ಶಾಲೆಯ ಸ್ಥಿತಿಗತಿ ಮತ್ತು ದುರಸ್ತಿ ಮಾಡುವಂತೆ ಆಡಳಿತ ಮಂಡಳಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಸಲ್ಲಿಸಿದ ಮನವಿಗೆ ಸ್ಪಂದನವಿಲ್ಲದೆ ಇದೀಗ ಶಾಲೆ ಅಪಾಯಕ್ಕೆ ಸಿಲುಕಿದೆ.