ಮಡಿಕೇರಿ, ಜೂ. 11: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ಶ್ರವಣದೋಷವುಳ್ಳ ಮಕ್ಕಳಿಗೆ ಹಾಗೂ ಅಂಧ ಮಕ್ಕಳಿಗೆ ಬೋಧಿಸಲು ವಿಶೇಷ ಶಿಕ್ಷಕರ ತರಬೇತಿ ಕಾರ್ಯಕ್ರಮ ಮೈಸೂರಿನ ತಿಲಕ್‍ನಗರದಲ್ಲಿ ನಡೆಸಲಾಗುವದು. ಈ ವಿಶೇಷ ಡಿ.ಎಡ್. ಕಾರ್ಯಕ್ರಮ ಗಳು ಸಾಮಾನ್ಯ ಡಿ.ಎಡ್‍ಗೆ ಸಮಾನಾಂತರವಾಗಿದೆ.
ಈ ತರಬೇತಿಗಳಿಗೆ ಸೇರಲು ಇಚ್ಚಿಸುವ ಅಭ್ಯರ್ಥಿಗಳು ಶೇ. 50 ರಷ್ಟು (ಎಸ್.ಸಿ, ಎಸ್.ಟಿ ಮತ್ತು ವಿಕಲಚೇತನ ವಿದ್ಯಾರ್ಥಿಗಳಿಗೆ ಶೇ. 45) ಅಂಕಗಳೊಂದಿಗೆ 10+2/ಪಿ.ಯು.ಸಿ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು. ಈ ತರಬೇತಿ ಕಾರ್ಯಕ್ರಮಗಳ ಅವಧಿ 2 ವರ್ಷವಾಗಿರುತ್ತದೆ. ಎಸ್.ಎಸ್.ಟಿ ಮತ್ತು ವಿಕಲಚೇತನ ವ್ಯಕ್ತಿಗಳಿಗೆ ಯಾವದೇ ಬೋಧನ ಶುಲ್ಕ ಇರುವದಿಲ್ಲ.
ತರಬೇತಿ ಕಾರ್ಯಕ್ರಮಗಳು: ಡಿ.ಎಡ್ ವಿಶೇಷ ಶಿಕ್ಷಣ(ವಿ1) (ಅಂಧ ಮಕ್ಕಳಿಗೆ ಶಿಕ್ಷಕರಾಗಲು), ಡಿ.ಎಡ್ ವಿಶೇಷ ಶಿಕ್ಷಣ (ಎಚ್1) (ಶ್ರವಣದೋಷವುಳ್ಳ ಮಕ್ಕಳಿಗೆ ಶಿಕ್ಷಕರಾಗಲು).
ಉದ್ಯೋಗ ಅವಕಾಶಗಳು: ತರಬೇತಿ ನಂತರ ಪ್ರಶಿಕ್ಷಣಾರ್ಥಿಗಳು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅನುದಾನದಿಂದ ನಡೆಯುತ್ತಿರುವ ಸರ್ಕಾರಿ/ಸರ್ಕಾರೇತರ ಶಾಲೆಗಳಲ್ಲಿ ವಿಶೇಷ ಶಿಕ್ಷಕರಾಗಿ, ಸಾಮಾನ್ಯ ಶಾಲೆಗಳಲ್ಲಿ ಶಿಕ್ಷಕರಾಗಿ, ಜಿಲ್ಲಾ ಆಸ್ಪತ್ರೆಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ, ಸರ್ವ ಶಿಕ್ಷಣ ಅಭಿಯಾನದಲ್ಲಿ ಸಂಪನ್ಮೂಲ ಶಿಕ್ಷಕರಾಗಿ ಕಾರ್ಯನಿರ್ವಹಿಸುವದು.
ಅಭ್ಯರ್ಥಿಗಳು ಮಾಹಿತಿಗಾಗಿ ತಿತಿತಿ. mಥಿsoಡಿe.ಟಿiಛಿ.iಟಿನಲ್ಲಿ ಪಡೆದುಕೊಳ್ಳಬಹುದು. ಹಾಗೂ ಅರ್ಜಿ ನಮೂನೆ hಣಣಠಿs://ಚಿಠಿಠಿಟಥಿಚಿಜmissioಟಿ.ಟಿeಣ/ಚಿioಚಿಣ2018/ನಲ್ಲಿ ಲಭ್ಯವಿದ್ದು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 08272-222830, 222829ನ್ನು ಹಾಗೂ ಉಪ ನಿರ್ದೇಶಕರು (ತರಬೇತಿ), ಸರ್ಕಾರಿ ಅಂಧ ಹಾಗೂ ಶ್ರವಣದೋಷವುಳ್ಳ ಮಕ್ಕಳ ಶಿಕ್ಷಕರ ತರಬೇತಿ ಕೇಂದ್ರ, ಪುಲಿಕೇಶಿ ರಸ್ತೆ, ತಿಲಕ್‍ನಗರ, ಮೈಸೂರು -570001 ದೂರವಾಣಿ 0821-2491600 ಸಂಪರ್ಕಿಸಬಹುದಾಗಿದೆ.