ಮಡಿಕೇರಿ, ಜೂ. 10: ಮಡಿಕೇರಿ ಕೆನರಾ ಬ್ಯಾಂಕ್ ಉದ್ಯೋಗಿ ಆಗಿದ್ದ ಚೊಂಡೀರ ಎ. ಸುರೇಶ್ ವಯೋ ನಿವೃತ್ತಿಗೊಂಡಿದ್ದು, ಕೆನರಾ ಬ್ಯಾಂಕ್ ಉದ್ಯೋಗಿಗಳು ಸನ್ಮಾನಿಸಿ ಬೀಳ್ಕೊಟ್ಟರು. ಮಡಿಕೇರಿಯ ಹೊಟೇಲ್ ಕೂರ್ಗ್ ಇಂಟರ್‍ನ್ಯಾಷನಲ್‍ನಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಚೊಂಡೀರ ಎ. ಸುರೇಶ್ ದಂಪತಿ ಗಳನ್ನು ಕೆನರಾ ಬ್ಯಾಂಕ್ ಉದ್ಯೋಗಿ ಗಳು, ನಿವೃತ್ತ ಉದ್ಯೋಗಿಗಳು, ಎಐಬಿಇಎ ಪ್ರತಿನಿಧಿಗಳು ಹಾಗೂ ಸುರೇಶ್ ಅವರ ಬಂಧುಮಿತ್ರರು, ಕೊಡಗಿನ ಪೇಟ ತೊಡಿಸಿ, ಶಾಲು ಹೊದಿಸಿ, ಫಲತಾಂಬೂಲ, ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕೆನರಾ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ವಿಕ್ಟರ್ ಡಿ’ಕ್ರೂಜ್ ವಹಿಸಿದ್ದರು. ಮ್ಯಾನೇಜರ್ ಧರ್ಮರಾಜ್, ಎಐಬಿಇಎ ಪ್ರತಿನಿಧಿ ವಿಜಯ ಶಂಕರ್, ‘ಶಕ್ತಿ’ ಸಂಪಾದಕ ಜಿ. ಚಿದ್ವಿಲಾಸ್ ಉಪಸ್ಥಿತರಿದ್ದರು.

ಹೆಚ್.ಎಲ್. ದಿವಾಕರ್ ಕಾರ್ಯಕ್ರಮ ನಿರೂಪಿಸಿದರು. ಟಿ.ಕೆ. ಸಾವಿತ್ರಿ ಪ್ರಾರ್ಥನೆ, ವಿಜಯಶಂಕರ್ ಸ್ವಾಗತಿಸಿ, ವಿಕ್ಕಿ ಅಪ್ಪಯ್ಯ ವಂದಿಸಿದರು.