ಮಡಿಕೇರಿ, ಜೂ. 10: 7ನೇ ಹೊಸಕೋಟೆಯಲ್ಲಿ ಶ್ರೀ ಮಹಾಗಣಪತಿ ಹಾಗೂ ದುರ್ಗಾಲಕ್ಷ್ಮಿ ದೇವತೆಗಳ ಪುನರ್ ಪ್ರತಿಷ್ಠಾಪನಾ ಪೂಜಾ ಕೈಂಕರ್ಯಗಳು ತಾ. 19 ರಿಂದ 21ರ ತನಕ ನಡೆಯಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ತಾ. 19 ರಂದು ಸಂಜೆ ದೇವರಿಗೆ ಹಸಿರುವಾಣಿ ಸಮರ್ಪಣೆ, 6 ಗಂಟೆಗೆ ತಂತ್ರಿಗಳ ಆಗಮನದೊಂದಿಗೆ ಶಿಲ್ಪಿಗಳಿಂದ ಗುಡಿಯ ಸ್ವೀಕಾರ, 7 ಗಂಟೆಗೆ ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ, ಸಪ್ತಶುದ್ಧಿ, ಪ್ರಸಾದ, ಅಂಕುರಪೂಜೆ, ವಾಸ್ತುಹೋಮ, ವಾಸ್ತುಬಲಿ, ಅಘೋರ ಹೋಮ, ಶಾಶ್ಥೋಘ್ನ ಹೋಮ, ದಿಕ್ಪಾಲಶ ಬಲಿ ನಡೆಯಲಿದೆ. ತಾ. 20 ರಂದು ಬೆಳಿಗ್ಗೆ 7 ಗಂಟೆಯಿಂದ ರಾತ್ರಿ ತನಕ ವಿವಿಧ ದೇವತಾ ಕಾರ್ಯಕ್ರಮ ಜರುಗಲಿವೆ.
ತಾ. 21 ರಂದು ಬೆಳಿಗ್ಗೆ 8.02 ಗಂಟೆಗೆ ಶುಭ ಕರ್ಕಾಟಕ ಲಗ್ನದಲ್ಲಿ ಶ್ರೀ ಮಹಾಗಣಪತಿ ಹಾಗೂ ಶ್ರೀ ದುರ್ಗಾ ಲಕ್ಷ್ಮೀ ಪ್ರತಿಷ್ಠಾಪನೆಯೊಂದಿಗೆ ಧಾರ್ಮಿಕ ಪೂಜೆಗಳು ನಡೆಯಲಿವೆ. ಆ ಬಳಿಕ 10.05 ಗಂಟೆಗೆ ಸಿಂಹಾ ಲಗ್ನದಲ್ಲಿ ಬ್ರಹ್ಮಕಲಶಾಭಿಷೇಕದೊಂದಿಗೆ ಪೂಜೆ, ಅಷ್ಠಬಂಧ ಸಹಿತ ಪೂಜೆ, ಪ್ರಸಾದ, ಮಂತ್ರಾಕ್ಷತೆಯನ್ನು ಪುಂಡೂರಿನ ಗೋಪಾಲಕೃಷ್ಣ ಕೆದಿಲಾಯ ನೇತೃತ್ವದಲ್ಲಿ ನೆರವೇರಿಸಲಿದ್ದಾರೆ ಎಂದು ಸಮಿತಿ ಪ್ರಮುಖರು ತಿಳಿಸಿದ್ದಾರೆ. ಅಂದು ರಾತ್ರಿ ಸಾಮೂಹಿಕ ರಂಗಪೂಜೆ ನೆರವೇರಲಿದೆ ಎಂದು ಮಾಹಿತಿ ನೀಡಿದ್ದಾರೆ.