ನಾಪೆÇೀಕ್ಲು: 1956 ರವರೆಗೆ ಇದ್ದ ಕೊಡಗಿನ ಭೂ ರಾಜಕೀಯ ಸ್ವರೂಪವನ್ನು ಸ್ವಾಯತ್ತ ಕೊಡವ ಲ್ಯಾಂಡ್ ಮತ್ತು ಕೇಂದ್ರಾಡಳಿತ ಪ್ರದೇಶದ ಹೆಸರಿನಲ್ಲಿ ಮರಳಿ ಸ್ಥಾಪಿಸಲು ಅರ್ಹನಿಸಿ ಕಳೆದ 28 ವರ್ಷಗಳಿಂದ ಶಾಂತಿಯುತ ಆಂದೋಲನ ರೂಪಿಸುತ್ತಾ ಬಂದಿರುವ ಕೊಡವರ ಸಾಕ್ಷಿ ಪ್ರಜ್ಞೆಯಾದ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ವಿಶ್ವ ಪರಿಸರ ದಿನವನ್ನು ದೇವಟ್ ಪರಂಬುವಿನಲ್ಲಿ ಸಸಿ ನೆಡುವ ಮೂಲಕ ಸಿ.ಎಸ್.ಸಿ ಅಧ್ಯಕ್ಷ ಎನ್.ಯು. ನಾಚಪ್ಪ ನೇತೃತ್ವದಲ್ಲಿ ಆಚರಿಸಲಾಯಿತು.

ಈ ಸಂದರ್ಭ ಕಲಿಯಂಡ ಪ್ರಕಾಶ್, ಮೂಕೊಂಡ ದಿಲೀಪ್, ಚೆಂಬಂಡ ಜನತ್ ಕುಮಾರ್, ಕುಲ್ಲೇರ ಕಾಳಪ್ಪ, ಅರೆಯಡ ಗಿರೀಶ್, ಅಪ್ಪಾರಂಡ ನೆಲ್ ದೇವಯ್ಯ ಇದ್ದರು.ಗೋಣಿಕೊಪ್ಪ ವರದಿ: ಪೊನ್ನಪ್ಪಸಂತೆ ಎಂ.ಸಿ.ಎಸ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಈಶ್ವರ ಇಕೋ ಕ್ಲಬ್ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿದರು.ನಾಪೆÇೀಕ್ಲು: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ನಾಪೆÇೀಕ್ಲು ಸರಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ಪ್ರಬಾರ ಪ್ರಾಂಶುಪಾಲೆ ಡಾ. ಕಾವೇರಿ ಪ್ರಕಾಶ್ ಕಾಲೇಜು ಆವರಣದಲ್ಲಿ ಸಸಿ ನೆಟ್ಟು ವಿದ್ಯಾರ್ಥಿಗಳಿಗೆ ದಿನಾಚರಣೆಯ ಮಹತ್ವ ಮತ್ತು ಪ್ರಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭ ನಿವೃತ್ತ ಅಧೀಕ್ಷಕ ಪಿ.ಎಸ್. ಪಳಂಗಪ್ಪ, ವಿದ್ಯಾರ್ಥಿಗಳಾದ ಕುಮಾರಿ, ರಶ್ಮಿ, ಶಾಫಿ, ಅನೀರ ರಾಯಿಲ ಇದ್ದರು.ನಾಪೆÇೀಕ್ಲು: ನಾಪೆÇೀಕ್ಲು ಶ್ರೀ ರಾಮಟ್ರಸ್ಟ್ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಇಕೋ ಕ್ಲಬ್, ಇಂಟರ್ಯಾಕ್ಟ್ ಕ್ಲಬ್ ಮತ್ತು ಗೈಡ್ಸ್ ಸಹಯೋಗದಲ್ಲಿ ಗಿಡ ನೆಟ್ಟು, ಭಾಷಣ ಸ್ವರಚಿತ ಘೋಷಣೆಗಳ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

ಈ ಸಂದರ್ಭ ಇಂಟರ್ಯಾಕ್ಟ್ ಕ್ಲಬ್‍ನ ಸಂಚಾಲಕಿ ಬಿ.ಎನ್. ತನುಜಾ, ಪ್ರಾಂಶುಪಾಲೆ ಶಾರದಾ ಮಕ್ಕಳಿಗೆ ಪರಿಸರ ಬಗ್ಗೆ ಅರಿವು ಮೂಡಿಸಿದರು.