ಗುಡ್ಡೆಹೊಸೂರು, ಜೂ. 10: ರೈಡರ್ಸ್ ರಿಪಬ್ಲಿಕ್ ಮೋಟಾರ್ ಸೈಕಲ್ ಕ್ಲಬ್ ಬೆಂಗಳೂರು ಗುಡ್ಡೆಹೊಸೂರು ಶಾಲೆಯ ವಿದ್ಯಾರ್ಥಿಗಳಿಗೆ ಸ್ಟೇಷನರಿ ವಸ್ತುಗಳನ್ನು ಕೊಡುಗೆಯಾಗಿ 2ನೇ ವರ್ಷವು ನೀಡಿದ್ದಾರೆ. ಸುಮಾರು 30 ಬೈಕ್‍ನಲ್ಲಿ ಆಗಮಿಸಿದ್ದ ತಂಡದಲ್ಲಿ ದುಬಾರಿ ಬೆಲೆಯ ಅಂದರೆ ರೂ. 25 ರಿಂದ 50 ಲಕ್ಷದ ಬೈಕ್‍ಗಳಲ್ಲಿ ಆಗಮಿಸಿದ್ದರು. ಈ ಕಾರ್ಯಕ್ರಮಕ್ಕೆ ಗ್ರಾ.ಪಂ. ಅಧ್ಯಕ್ಷೆ ಕೆ.ಎಸ್. ಭಾರತಿ,ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಯ್ಯ, ಎಸ್.ಡಿ.ಎಂ.ಸಿ. ಅಧ್ಯಕ್ಷ ಬಿ.ಎಸ್. ದಿನೇಶ್, ಆರ್.ಎಂ.ಸಿ.ಸಿ.ಯ ತಿರುಮಲ ಗೊವಿಂದರಾಜು, ಮೋಹನ್ ಮಲ್ಲಪ್ಪ, ಮಹೇಶ್ ಅಸಗುಡಿ, ಯಾದವ್ ಹಾಗೂ ಅವರ ತಂಡದ 40ಕ್ಕೂ ಹೆಚ್ಚು ಸದಸ್ಯರು ವೇದಿಕೆಯಲ್ಲಿ ಹಾಜರಿದ್ದರು. ಶಾಲೆಯ ಮುಖ್ಯ ಶಿಕ್ಷಕ ಸಣ್ಣಸ್ವಾಮಿ ಸ್ವಾಗತಿಸಿದರು. ಶಿಕ್ಷಕಿ ಎ.ವಿ. ಮರಿಯ ಪ್ರಾರ್ಥಿಸಿದರು. ಬಿ.ಡಿ. ಯಶುಮತಿ ನಿರೂಪಿಸಿದರು. ಜಯಂತಿ ವಂದಿಸಿದರು. ಶಿಕ್ಷಕಿಯರಾದ ರುಕ್ಮಿಣಿ ಮತ್ತು ಕವಿತ ಅತಿಥಿ ಸತ್ಕಾರ ಮಾಡಿದರು.