ಮಡಿಕೇರಿ, ಜೂ. 10: ಕೊಡಗು ಜಿಲ್ಲೆಯಲ್ಲಿ ಮಳೆಯ ರಭಸ ಭಾನುವಾರ ದಿನವಾದ ತಾ. 10ರಂದು ಮುಂದುವರಿದಿದೆ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮೃಗಶಿರ ಮಳೆ ನಕ್ಷತ್ರದಲ್ಲಿ ಕಂಡುಬರುತ್ತಿರುವವ ಬಿರುಸು ಯಥಾ ಸ್ಥಿತಿಯಲ್ಲಿದೆ. ಇಂದು ಕೂಡ ಹಲ ವಾರು ಕಡೆಗಳಲ್ಲಿ ಮರಗಳು ಉರುಳಿ ಬಿದ್ದಿರುವ ಕುರಿತು ವರದಿಯಾಗಿದೆ. ನದಿ - ತೊರೆಗಳಲ್ಲಿ ನೀರಿನ ಮಟ್ಟ ಅಧಿಕಗೊಳ್ಳುತ್ತಿದ್ದು, ಕೆಲವೆಡೆ ರಸ್ತೆಗಳಲ್ಲಿ ನೀರು ನಿಂತು ಸಮಸ್ಯೆಯಾಗಿತ್ತು.
ಲಭ್ಯವಾದ ಮಳೆ ಹಾನಿಯ ಮಾಹಿತಿ
ಬೇತ್ರಿ : ಬೇತ್ರಿ ಹೆಮ್ಮಾಡುವಿನಲ್ಲಿ ಭದ್ರಕಾಳಿ ದೇವಾಲಯದ ಪೌಳಿಯ ಮೇಲೆ ಮರ ಬಿದ್ದು ದೇವಾಲಯ ಜಖಂಗೊಂಡಿದೆ.
ನಾಲಡಿ: ನಾಲಡಿ ಗ್ರಾಮದಲ್ಲಿ ಅಲ್ಲಿನ ನಿವಾಸಿ ಪದ್ಮಜ ಎಂಬವರ ಮನೆಯ ಮೇಲ್ಚಾವಣಿ ಮಳೆ - ಗಾಳಿಯ ರಭಸಕ್ಕೆ ಹಾರಿಹೋಗಿದ್ದು, ನಷ್ಟ ಸಂಭವಿಸಿರುವ ಕುರಿತು ಜಿಲ್ಲಾಡಳಿತಕ್ಕೆ ವರದಿಯಾಗಿದೆ.
ಅರೆಕಾಡು ಶಾಲೆ :ಅರೆಕಾಡು ಗ್ರಾಮದ ಸರಕಾರಿ ಶಾಲೆಯ ಮೇಲೆ ವಾಯು - ವರುಣನ ಅಬ್ಬರಕ್ಕೆ ಮರವೊಂದು ಉರುಳಿಬಿದ್ದಿದ್ದು, ಶಾಲೆ ಜಖಂಗೊಂಡಿದೆ.
ಕರಡಿಗೋಡುವಿನಲ್ಲಿ ಗಂಜಿ ಕೇಂದ್ರ
ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಸಿದ್ದಾಪುರದ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾದ ಹಿನೆÀ್ನಲೆಯಲ್ಲಿ ಕರಡಿಗೋಡಿನ ಹಾಗೂ ಗುಯ್ಯ ಗ್ರಾಮದ ನದಿ ದಡದ ನಿವಾಸಿಗಳಿಗೆ ಕಂದಾಯ ಇಲಾಖೆಯ ವತಿಯಿಂದ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಮುನ್ನೆಚ್ಚರಿಕೆ ಕ್ರಮವಾಗಿ ನೋಟಿಸ್ ಜಾರಿ ಮಾಡಲಾಯಿತು. ಅಲ್ಲದೆ ಕರಡಿಗೋಡುವಿನ ನದಿ ದಡದ ನಿವಾಸಿಗಳಿಗೆ ಕರಡಿಗೋಡು ಪ್ರಾಥಮಿಕ ಶಾಲೆಯಲ್ಲಿ ಗಂಜಿ ಕೇಂದ್ರವನ್ನು ತೆರೆಯಲಾಗಿದೆ. ಈ ಸಂದರ್ಭದಲ್ಲಿ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ಅನಿಲ್, ಗ್ರಾಮಲೆಕ್ಕಿಗ ಮಂಜುನಾಥ್, ಸಹಾಯಕ ಕೃಷ್ಣ, ಹಾಜರಿದ್ದರು. ಕರಡಿಗೋಡು ನದಿದಡದ 104 ಹಾಗೂ ಗುಹ್ಯ ಗ್ರಾಮದ 67 ಮನೆಗಳಿಗೆ ನೋಟೀಸ್ ಜಾರಿಮಾಡ ಲಾಯಿತು.
ನಾಪೆÇೀಕ್ಲು ವ್ಯಾಪ್ತಿಯಲ್ಲಿ ಮುಂದುವರಿದ ಮಳೆ
ನಾಪೆÇೀಕ್ಲು : ನಾಪೆÇೀಕ್ಲು ವ್ಯಾಪ್ತಿಯಲ್ಲಿ ಮಳೆಯ ಆರ್ಭಟ ಇನ್ನೂ ಹೆಚ್ಚಾಗಿದೆ. ತೋಡು, ಹೊಳೆ, ನದಿಗಳಲ್ಲಿ ನೀರಿನ ಮಟ್ಟ ಅಪಾಯದ ಮಟ್ಟಕ್ಕೆ ಏರುತ್ತಿದೆ. ಕಾವೇರಿ ನದಿ ಹರಿಯುತ್ತಿರುವ ಕೊಟ್ಟಮುಡಿ ಹಾಗೂ ಬೊಳಿಬಾಣೆಗಳಲ್ಲಿ ನೀರಿನ ಮಟ್ಟ ಅಪಾಯದತ್ತ ಏರಿಕೆಯಾಗುತ್ತಿದೆ. ಇನ್ನುಳಿದಂತೆ ಕಕ್ಕಬ್ಬೆ ನದಿಯ ನೀರಿನ ಮಟ್ಟದಲ್ಲಿಯೂ ಏರಿಕೆ ಕಂಡು ಬಂದಿದೆ. ನಾಲಡಿ ಗ್ರಾಮದ ಅಂಬಲಪೆÇಳೆಯಲ್ಲಿ ಪ್ರವಾಹ ಹೆಚ್ಚಾದ ಕಾರಣ ಎರಡೂ ಸೇತುವೆಗಳು ಜಲಾವೃತಗೊಂಡಿದೆ. ಮಳೆಯು ಇದೇ ರೀತಿ ಮುಂದುವರಿದಲ್ಲಿ ಕಕ್ಕಬ್ಬೆಯಲ್ಲಿ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳಕ್ಕೆ ತೆರಳುವ ರಸ್ತೆಯಲ್ಲಿ ಪ್ರವಾಹ ಉಂಟಾಗಲಿದೆ. ಹಾಗೆಯೇ ನಾಪೆÇೀಕ್ಲು - ಮೂರ್ನಾಡು ರಸ್ತೆಯ ಬೊಳಿಬಾಣೆಯಲ್ಲಿಯೂ ಕಾವೇರಿ ನದಿ ಪ್ರವಾಹ ಭೀತಿ ಉಂಟಾಗಿದೆ. ಒಟ್ಟಿನಲ್ಲಿ ಮಳೆಯ ಪ್ರಮಾಣದಲ್ಲಿ ಏರಿಕೆಯಾಗಿರುವದನ್ನು ಬಿಟ್ಟರೆ ಉಳಿದಂತೆ ಯಾವದೇ ಅನಾಹುತ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ಬಾರದ ವಿದ್ಯುತ್: ಈ ವ್ಯಾಪ್ತಿಯಲ್ಲಿ ಕಳೆದ ನಾಲ್ಕು ದಿನಗಳಿಂದ ವಿದ್ಯುತ್ ಸಂಪರ್ಕವಿಲ್ಲದೆ ಸಾರ್ವ ಜನಿಕರು ಕತ್ತಲೆಯಲ್ಲಿ ಕಳೆಯು ವಂತಾಗಿದೆ. ಇದಕ್ಕೆ ವಿದ್ಯುತ್ ಇಲಾಖಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸಾರ್ವಜನಿಕರು ದೂರಿದ್ದಾರೆ. ಬೇಸಿಗೆಯಲ್ಲಿ ವಿದ್ಯುತ್ ತಂತಿಗಳ ಬಳಿಯಿರುವ ಮರದ ರೆಂಬೆ, ಕೊಂಬೆಗಳ ತೆರವು ಕಾರ್ಯ ಕೈಗೊಳ್ಳದಿರುವದೇ ಇದಕ್ಕೆ ಮೂಲ ಕಾರಣ. ಇತ್ತೀಚಿನ ವಿದ್ಯುತ್ ಕಂಬಗಳ ಒಳಗೆ ಅಳವಡಿಸಿರುವ ತಂತಿಗಳು ಅತೀ ಸಣ್ಣ ಮತ್ತು ಕಳಪೆ ಗುಣಮಟ್ಟ ದಿಂದ ಕೂಡಿರುವದರಿಂದ ಸಣ್ಣ ಮರದ ರೆಂಬೆಗಳು ಬಿದ್ದರೂ ಕಂಬಗಳು ಮುರಿದು ಬೀಳುತ್ತವೆ. ಇದಕ್ಕೆ ವಿದ್ಯುತ್ ಇಲಾಖಾಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ದಕ್ಷಿಣ ಕೊಡಗಿನಲ್ಲಿ ಬಾರದ ವಿದ್ಯುತ್ : 303 ಕಂಬ ಹಾನಿ
ಗೋಣಿಕೊಪ್ಪ ವರದಿ : ದಕ್ಷಿಣ ಕೊಡಗಿನಲ್ಲಿ ವರುಣನ ಆರ್ಭಟಕ್ಕೆ ವಿದ್ಯುತ್ ಕಂಬ ಹಾಗೂ ತಂತಿಗಳು ನೆಲಕಚ್ಚಿವೆ.
ಬಾಳೆಲೆ, ಗೋಣಿಕೊಪ್ಪ, ಶ್ರೀಮಂಗಲ ವಿದ್ಯುತ್ ಉಪಕೇಂದ್ರ ವ್ಯಾಪ್ತಿಯಲ್ಲಿ 303 ವಿದ್ಯುತ್ ಕಂಬ ಮುರಿದು ಬಿದ್ದಿದ್ದು, 8 ಟ್ರಾನ್ಸ್ಫಾರಂ ಕೆಟ್ಟು ಹೋಗಿವೆ.
ಮಳೆ ಗಾಳಿಗೆ, ದಕ್ಷಿಣ ಕೊಡಗಿನ ಬಾಳೆಲೆ, ಗೋಣಿಕೊಪ್ಪ, ಶ್ರೀಮಂಗಲ ವಿದ್ಯುತ್ ಉಪಕೇಂದ್ರ ವ್ಯಾಪ್ತಿಯಲ್ಲಿ 303 ವಿದ್ಯುತ್ ಕಂಬ ಮುರಿದು ಬಿದ್ದಿದ್ದು, 8 ಟ್ರಾನ್ಸ್ಫಾರಂ ಕೆಟ್ಟು ಹೋಗಿವೆ. ತಂತಿಗಳು ನೆಲಕಚ್ಚಿವೆ. ಬದಲಿ ವ್ಯವಸ್ಥೆ ನಡೆಯುತ್ತಿದೆ.
ಈಗಾಗಲೇ ಪಟ್ಟಣ ಹಾಗೂ ಮುಖ್ಯರಸ್ತೆಯ ಒತ್ತಿನಲ್ಲಿ ಬರುವ 150 ಕಂಬಗಳನ್ನು ಬದಲಿ ಕಂಬವಾಗಿ ನೆಡಲಾಗಿದೆ. ಉಳಿದಂತೆ ಗ್ರಾಮೀಣ ಪ್ರದೇಶದಲ್ಲಿ ಸಂಪೂರ್ಣವಾಗಿ ಕಂಬ ನಿಲ್ಲಿಸಲು ಇನ್ನೆರಡು ದಿನ ಬೇಕಾಗಲಿದೆ. ಇದೇ ರೀತಿ ಮಳೆ ಗಾಳಿ ಮುಂದುವರಿದರೆ ಇನ್ನಷ್ಟು ವಿಳಂಭ ವಾಗಲಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎಂ. ಅಂಕಯ್ಯ ಮಾಹಿತಿ ನೀಡಿದ್ದಾರೆ.
ಕಳೆದ ಮೂರು ದಿನಗಳಿಂದ ದಕ್ಷಿಣ ಕೊಡಗಿನ ಗ್ರಾಮಗಳು ವಿದ್ಯುತ್ ಇಲ್ಲದೆ ಕತ್ತಲಲ್ಲಿದೆ. ಗಾಳಿ ಮಳೆಯ ಕಾರಣ ವಿದ್ಯುತ್ ಸಂಚಾರದಲ್ಲಿ ತೊಡಕುಂಟಾಗಿದೆ. ಮಳೆಯಿಂದಾಗಿ ತುರ್ತಾಗಿ ಸೇವೆ ನೀಡಲು ಸೆಸ್ಕ್ ಸಿಬ್ಬಂದಿ ಹರ ಸಹಾಸ ಪಡುವಂತಾ ಗಿದೆ. ಗೋಣಿಕೊಪ್ಪ ಹಾಗೂ ಪೊನ್ನಂಪೇಟೆ ಪಟ್ಟಣದಲ್ಲಿ ಕೂಡ ವಿದ್ಯುತ್ ನಿಲ್ಲದೆ ತೊಂದರೆಯಾಗಿದೆ.
ಸಮಾರಂಭಗಳಿಗೂ ತಟ್ಟಿದ ಚಳಿ...
ಜಿಲ್ಲೆಯ ಹಲವು ಕಡೆಗಳಲ್ಲಿ ಇಂದು ಮದುವೆ ಮತ್ತಿತರ ಶುಭ ಕಾರ್ಯಗಳಿದ್ದು, ಆಗಾಗ್ಗೆ ಸುರಿ ಯುತ್ತಿದ್ದ ಮಳೆಯಿಂದಾಗಿ ಸಮಾ ರಂಭಕ್ಕೆ ತೆರಳುವವರು, ಆಯೋಜಕರು ಸಮಸ್ಯೆ ಎದುರಿಸುವಂತಾಗಿತ್ತು.
ಮಳೆ ನೀರಿನಲ್ಲಿ ಚಂಡಿಯಾಗುವ ದರೊಂದಿಗೆ ರಸ್ತೆಯ ಅವ್ಯವಸ್ಥೆ ಯಿಂದಾಗಿ ಕೆಸರಿನಿಂದಲೂ ಪರ ದಾಡುವಂತಾಗಿತ್ತು. ದಿನವಿಡೀ ಕಾರ್ಯಕ್ರಮಗಳು ಇದ್ದವರು ಚಳಿ- ಗಾಳಿಯ ನಡುವೆ ಕಾರ್ಯ ನಡೆಸಬೇಕಾಯಿತು.
ಸಂಪರ್ಕ ಕಡಿತ
ಮೂರ್ನಾಡು : ಧಾರಾಕಾರವಾಗಿ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮೂರ್ನಾಡು ಸಮೀಪದ ಬಲಮುರಿ ಯಲ್ಲಿ ಕಿರು ಸೇತುವೆ ಮೇಲ್ಬಾಗದಲ್ಲಿ ಎಂಟು ಅಡಿಗಳಷ್ಟು ನೀರು ಹರಿ ಯುತ್ತಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ.
ಕುಟ್ಟಂದಿ: ಕುಟ್ಟಂದಿಯಲ್ಲಿ ಚಂದುರ ಪೂವಯ್ಯ ಎಂಬವರ ಮನೆ ಮೇಲೆ ಮರಬಿದ್ದು, ಅಂದಾಜು ರೂ. 50 ಸಾವಿರ ನಷ್ಟ ಸಂಭವಿಸಿರುವ ಕುರಿತು ಜಿಲ್ಲಾಡಳಿತಕ್ಕೆ ವರದಿಯಾಗಿದೆ.
ಹೊಸ್ಕೇರಿ: ಹೊಸ್ಕೇರಿ ಗ್ರಾಮದಲ್ಲಿ ಜಯರಾಂ ಎಂಬವರ ಮನೆ ಹಿಂಭಾಗದಲ್ಲಿ ಬರೆ ಕುಸಿತಗೊಂಡು ಹಾನಿ ಸಂಭವಿಸಿದೆ.
ಸುಂಟಿಕೊಪ್ಪ : ಕೆದಕಲ್ ಸಮೀಪದ ಭದ್ರಕಾಳಿ ದೇವಸ್ಥಾನ ಸಮೀಪವಿರುವ ಹೋಂಸ್ಟೆಗೆ ಭಾರೀ ಗಾತ್ರದ ಮರ ಉರುಳಿ ಬಿದ್ದು ಲಕ್ಷಾಂತರ ರೂ ನಷ್ಟ ಉಂಟಾಗಿದೆ.
ಪ್ರಮೋದ್ ಎಂಬವರಿಗೆ ಸೇರಿದ ಜಮ್ಮಾಬಾಣೆ ಹೋಂಸ್ಟೆ ಮೇಲೆ ಭಾರೀ ಗಾತ್ರದ ಮರವು ಉರುಳಿ ಬಿದ್ದಿದ್ದು ಮೇಲ್ಚಾವಣಿ ಹಾಗೂ ಯಂತ್ರೋ ಪಕರಣಗಳು ಸೇರಿದಂತೆ ಗೃಹ ಉಪಯೋಗಿ ವಸ್ತುಗಳು ಸಂಪೂರ್ಣ ಧ್ವಂಸಗೊಂಡಿದ್ದು, ಲಕ್ಷಾಂತರ ರೂ ನಷ್ಟ ಉಂಟಾಗಿದೆ.
ಕುಶಾಲನಗರ : ಕಾವೇರಿ ನದಿಯಲ್ಲಿ ನೀರಿನ ಹರಿವು ಏರಿಕೆ ಯಾಗುವದರೊಂದಿಗೆ ಕೆಲವೆಡೆ ಹೊಲ ಗದ್ದೆಗಳು ನೀರಿನಲ್ಲಿ ಮುಳುಗಡೆ ಯಾಗುತ್ತಿರುವ ದೃಶ್ಯ ಗೋಚರಿಸಿದೆ. ಕಳೆದ 3 ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕುಶಾಲನಗರದಲ್ಲಿ ಕಾವೇರಿ ನದಿ ಸೇತುವೆ ಬಳಿ ತುಂಬಿ ಹರಿಯುತ್ತಿದೆ. ನೀರಿನ ಹರಿವಿನ ಮಟ್ಟ 5.5 ಮೀಟರ್ಗಳಷ್ಟು ಏರಿಕೆಯಾಗಿದೆ.
ಕುಶಾಲನಗರ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಬೆಳಗಿನಿಂದ ಸಂಜೆ ತನಕ ಮೋಡ ಮಿಶ್ರಿತ ವಾತಾವರಣ ದೊಂದಿಗೆ ಅಲ್ಪಸ್ವಲ್ಪ ಮಳೆಯಾದ ಬಗ್ಗೆ ವರದಿಯಾಗಿದೆ. ಪಟ್ಟಣದ ಸಮೀಪದ ಗೊಂದಿಬಸವನಹಳ್ಳಿ ಗ್ರಾಮದ ನಿವಾಸಿ ಯೋಗೇಶ್ ಎಂಬವರಿಗೆ ಸೇರಿದ ದನದ ಕೊಟ್ಟಿಗೆ ಗೋಡೆ ಕುಸಿದಿದ್ದು ಸ್ಥಳದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಕ್ಕೆ ಅಲ್ಪಸ್ವಲ್ಪ ಹಾನಿಯಾಗಿದೆ. ಶುಕ್ರವಾರ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಮೈಸೂರು ನಿವಾಸಿಯ ಮೃತದೇಹ ಇನ್ನೂ ಪತ್ತೆಯಾಗಿಲ್ಲ. ಪೊಲೀಸರು ಮತ್ತು ಮೃತನ ಕುಟುಂಬಸ್ಥರು ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.