ಸೋಮವಾರಪೇಟೆ, ಜೂ. 10: ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಲಾಗಿದ್ದ ತಾಲೂಕು ಸರ್ಕಾರಿ ನಿವೃತ್ತ ನೌಕರರ ಸಂಘದ ವಾರ್ಷಿಕ ಮಹಾ ಸಭೆಯಲ್ಲಿ ಸಂಘದ ಹಿರಿಯ ಸದಸ್ಯರುಗಳನ್ನು ಸನ್ಮಾನಿಸಲಾಯಿತು. ಹಿರಿಯ ಸದಸ್ಯರುಗಳಾದ ಬಿ.ಜಿ. ಗುರಪ್ಪ, ಡಿ.ಪಿ. ಉತ್ತಯ್ಯ, ಬಿ.ಎಸ್. ನಿರ್ಮಲ ಹಾಗೂ ಕಮಲಾಕ್ಷಮ್ಮ ಅವರುಗಳನ್ನು ಪದಾಧಿಕಾರಿಗಳು ಗೌರವಿಸಿದರು. ಈ ಸಂದರ್ಭ ಸಂಘದ ಅಧ್ಯಕ್ಷ ಹಾಲೇ ಬೇಲೂರು ನಿರ್ವಾಣಿ ಶೆಟ್ಟಿ, ಜಿಲ್ಲಾಧ್ಯಕ್ಷ ಹೆಚ್.ಎಂ. ಮಹಮದ್, ಸುಳ್ಯ ಅಧ್ಯಕ್ಷ ಡಾ. ಎಸ್. ರಂಗಯ್ಯ, ತಾಲೂಕು ಗೌರವಾಧ್ಯಕ್ಷ ಎಸ್.ಸಿ. ರಾಜಶೇಖರ್, ಉಪಾಧ್ಯಕ್ಷ ಎ.ಎಂ. ಗುಂಡೇಗೌಡ, ಕಾರ್ಯದರ್ಶಿ ಬಿ.ಕೆ. ತಿಮ್ಮಯ್ಯ, ಸಹ ಕಾರ್ಯದರ್ಶಿ ಎಂ.ಪಿ. ನಾರಾಯಣ ಮೂರ್ತಿ, ಖಜಾಂಚಿ ಹೆಚ್.ಜಿ. ಕುಟ್ಟಪ್ಪ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್, ಸಲಹೆಗಾರÀ ಬಿ.ಪಿ. ಬಸಪ್ಪ ಮತ್ತಿತರರು ಹಾಜರಿದ್ದರು.