ಮಡಿಕೇರಿ, ಜೂ. 10: ಮಂಗಳೂರು ವಿಶ್ವವಿದ್ಯಾನಿಲಯದ ದೂರ ಶಿಕ್ಷಣದ ಕಾರ್ಯಕ್ರಮದಡಿಯಲ್ಲಿ ತಾ. 15 ರಂದು ಪ್ರಾರಂಭವಾಗಬೇಕಾಗಿದ್ದ ವಿವಿಧ ಪದವಿ ಮತ್ತು ಸ್ನಾತಕೋತ್ತರ ಕೋರ್ಸುಗಳ ಪರೀಕ್ಷೆಗಳನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದ್ದು, ತಾ. 18 ರಿಂದ ಈ ಕೆಳಗಿನ ಪರೀಕ್ಷಾ ಕೇಂದ್ರಗಳಲ್ಲಿ ಪ್ರಾರಂಭವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಪದವಿ ಮಟ್ಟದ ಪರೀಕ್ಷೆಗಳು ವಿಶ್ವವಿದ್ಯಾನಿಲಯ ಕಾಲೇಜು, ಹಂಪನಕಟ್ಟ ಮಂಗಳೂರು-575001. ಸ್ನಾತಕೋತ್ತರ ಎಂ.ಕಾಂ ಪರೀಕ್ಷೆಗಳು ರೊಜಾರಿಯೋ ಕಾಲೇಜ್ ಆಫ್ ಮ್ಯಾನೆಜ್ಮೆಂಟ್ ಸ್ಟಡೀಸ್ ಕ್ಯಾಥೆಡ್ರಲ್ ಪಾಂಡೇಶ್ವರ ಮಂಗಳೂರು-575001. ಸ್ನಾತಕೋತ್ತರ ಎಂ.ಎ. (ಹಿಂದಿ, ಕನ್ನಡ, ಇಂಗ್ಲೀಷ್, ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ ಹಾಗೂ ಸಮಾಜಶಾಸ್ತ್ರ) ಮತ್ತು ಎಂ.ಬಿ.ಎ(ಟಿ.ಎ) ಪರೀಕ್ಷೆಗಳು ಡಾ. ದಯಾನಂದ ಪೈ, ಡಾ. ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ, ಮಂಗಳೂರು-575001. ಪದವಿ ಮಟ್ಟದ ಪರೀಕ್ಷೆಗಳು ಮಹಾತ್ಮಾ ಗಾಂಧಿ ಮೆಮೋರಿಯಲ್ ಕಾಲೇಜು, ಕುಂಜಿಬೆಟ್ಟು, ಉಡುಪಿ-576102. ಎಲ್ಲಾ ಸ್ನಾತಕೋತ್ತರ ಪರೀಕ್ಷೆಗಳು ಸರಕಾರಿ ಪ್ರಥಮ ದರ್ಜೆ ಕಾಲೇಜು, ಕಾಪು-ಉಡುಪಿ. ಎಲ್ಲಾ ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆಗಳು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು-ಮಡಿಕೇರಿ-571 201. ಎಲ್ಲಾ ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆಗಳು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪುತ್ತೂರು-574 201 ರಲ್ಲಿ ಪರೀಕ್ಷೆಗಳು ನಡೆಯಲಿವೆ.
ಪರಿಷ್ಕøತ ವೇಳಾಪಟ್ಟಿ ಮತ್ತು ಪರೀಕ್ಷಾ ಕೇಂದ್ರದ ವಿವರ ವಿಶ್ವವಿದ್ಯಾನಿಲಯದ ವೆಬ್ಸೈಟ್ ತಿತಿತಿ.mಚಿಟಿgಚಿಟoಡಿeuಟಿiveಡಿsiಣಥಿ.ಚಿಛಿ.iಟಿನಲ್ಲಿ ಲಭ್ಯವಿರುತ್ತದೆ.