ಗೋಣಿಕೊಪ್ಪ ವರದಿ, ಜೂ. 10: ಇಲ್ಲಿನ ಶ್ರೀ ಇಗ್ಗುತ್ತಪ್ಪ ಕೊಡವ ಸಂಘದ ಆಡಳಿತ ಮಂಡಳಿ ರಚನೆ ಮಾಡಲಾಗಿದ್ದು, ಅಧ್ಯಕ್ಷೆಯಾಗಿ ಕೊಣಿಯಂಡ ಬೋಜಮ್ಮ ಉತ್ತಪ್ಪ, ಕಾರ್ಯದರ್ಶಿಯಾಗಿ ಅಜ್ಜಿಕುಟ್ಟೀರ ಸಿ. ದೇವಯ್ಯ ಪುನರಾಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ತಿರುನೆಲ್ಲಿಮಾಡ ಎಂ. ದೇವಯ್ಯ, ಸಹ ಕಾರ್ಯದರ್ಶಿಯಾಗಿ ಹೊಟ್ಟೇಂಗಡ ಬಿಂದು ಬೋಜಮ್ಮ, ಖಜಾಂಚಿಯಾಗಿ ಕರ್ತುರ ನಾಚಪ್ಪ, ನಿರ್ದೇಶಕರುಗಳಾಗಿ ಕುಪ್ಪಂಡ ಗಣೇಶ್ ತಿಮ್ಮಯ್ಯ, ಉಳುವಂಗಡ ಕಿಶೋರ್ ಮುತ್ತಪ್ಪ, ತಿರುನೆಲ್ಲಿಮಾಡ ಜೀವನ್, ಮೋರ್ಕಂಡ ಗಣಪತಿ, ಮೂಕಳಮಾಡ ಪೂಣಚ್ಚ, ಚೋನಿರ ಮಂಜು, ಕಾಡ್ಯಮಾಡ ನೀಲ ದೇವಯ್ಯ, ಮುಕ್ಕಾಟಿರ ರೀನ ಪೆಮ್ಮಯ್ಯ, ಕೊಳೇರ ಸರಳ, ಮಲ್ಚೀರ ಯಶೋದ ದೇವಯ್ಯ, ಮಾಚಂಗಡ ನವೀನ್ ಪೆಮ್ಮಯ್ಯ ಹಾಗೂ ಮುಕ್ಕಾಟಿರ ರಾಯ್ ಉತ್ತಯ್ಯ ಆಯ್ಕೆಯಾಗಿದ್ದಾರೆ