ಬೆಂಗಳೂರು, ಜೂ. 8: ಸಮ್ಮಿಶ್ರ ಸರಕಾರದ ನೂತನ ಸಚಿವರುಗಳಿಗೆ ಕೊನೆಗೂ ಖಾತೆ ಹಂಚಿಕೆ ಮಾಡಲಾಗಿದೆ. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಉಪ ಮುಖ್ಯಮಂತ್ರಿ ಡಾ. ಪರಮೇಶ್ವರ್ ಅವರುಗಳು ಖಾತೆ ಹಂಚಿಕೆ ಕಾರ್ಯವನ್ನು ಅಂತಿಮಗೊಳಿಸಿದ್ದು, ಪ್ರಮುಖ ಖಾತೆಗಳಾದ ಹಣಕಾಸು, ಇಂಧನ, ಗುಪ್ತವಾರ್ತೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಖಾತೆಗಳನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ.
ಇನ್ನುಳಿಂದತೆ ಪರಮೇಶ್ವರ್ - ಗೃಹ , ಬೆಂಗಳೂರು ನಗರಾಭಿವೃದ್ಧಿ, ಎಚ್.ಡಿ. ರೇವಣ್ಣ - ಲೋಕೋಪಯೋಗಿ, ಆರ್.ವಿ. ದೇಶಪಾಂಡೆ - ಕಂದಾಯ, ಡಿ.ಕೆ. ಶಿವಕುಮಾರ್ - ಜಲಸಂಪನ್ಮೂಲ, ವೈದ್ಯಕೀಯ ಶಿಕ್ಷಣ, ಕೆ.ಜೆ. ಜಾರ್ಜ್ - ಬೃಹತ್ ಕೈಗಾರಿಕೆ, ಬಂಡೆಪ್ಪ ಕಾಶಂಪುರ್ - ಸಹಕಾರ, ಕೃಷ್ಣಬೈರೇಗೌಡ - ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕಾನೂನು ಮತ್ತು ಸಂಸದೀಯ ವ್ಯವಹಾರ, ಯುಟಿ ಖಾದರ್ - ನಗರಾಭಿವೃದ್ಧಿ , ವಸತಿ, ಸಿ.ಎಸ್. ಪುಟ್ಟರಾಜು - ಸಣ್ಣ ನೀರಾವರಿ, ಶಿವಶಂಕರ್ ರೆಡ್ಡಿ - ಕೃಷಿ, ಪ್ರಿಯಾಂಕ್ ಖರ್ಗೆ - ಸಮಾಜ ಕಲ್ಯಾಣ,ಜಮೀರ್ ಅಹಮದ್ - ಆಹಾರ ಮತ್ತ ನಾಗರೀಕ ಪೂರೈಕೆ, ಅಲ್ಪಸಂಖ್ಯಾತ ಕಲ್ಯಾಣ, ಶಿವಾನಂದ ಪಾಟೀಲ್ - ಆರೋಗ್ಯ , ವೆಂಕಟರಮಣಪ್ಪ - ಕಾರ್ಮಿಕ, ರಾಜಶೇಖರ್ ಪಾಟೀಲ್ - ಗಣಿ ಮತ್ತು ಭೂವಿಜ್ಞಾನ, ಪುಟ್ಟರಂಗಶೆಟ್ಟಿ - ಹಿಂದುಳಿದ ವರ್ಗಗಳ ಕಲ್ಯಾಣ, ಶಂಕರ್ - ಅರಣ್ಯ, ಜಯಮಾಲ - ಮಹಿಳಾ ಮತ್ತು ಮಕ್ಕಳ ಕಲ್ಯಾಣ, ರಮೇಶ್ ಜಾರಕಿಹೊಳಿ - ಪೌರಾಡಳಿತ ಮತ್ತು ಯುವಜನ ಮತ್ತು ಕ್ರೀಡೆ, ಜಿ.ಟಿ. ದೇವೇಗೌಡ - ಉನ್ನತ ಶಿಕ್ಷಣ, ಸಾರಾ ಮಹೇಶ್ - ಪ್ರವಾಸೋದ್ಯಮ, ಎನ್. ಮಹೇಶ್ - ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಡಿ.ಸಿ. ತಮ್ಮಣ್ಣ - ಸಾರಿಗೆ.