ಗೋಣಿಕೊಪ್ಪ ವರದಿ, ಜೂ. 8: ಎಸ್‍ಎಸ್‍ಎಲ್‍ಸಿ ಮರು ಮೌಲ್ಯಮಾಪನದಲ್ಲಿ 612 ಅಂಕ ಪಡೆಯುವ ಮೂಲಕ ಗೋಣಿಕೊಪ್ಪ ಲಯನ್ಸ್ ಶಾಲೆಯ ವಿದ್ಯಾರ್ಥಿನಿ ಚೆಪ್ಪುಡೀರ ಅಮೃತ ಬೋಪಣ್ಣ ಜಿಲ್ಲೆಗೆ 3ನೇ ಸ್ಥಾನ ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ಬಂದ ಫಲಿತಾಂಶದಲ್ಲಿ ಅಮೃತಾ ಅವರಿಗೆ ವಿಜ್ಞಾನದಲ್ಲಿ 84 ಅಂಕ ನೀಡಲಾಗಿತ್ತು. ಇದರಂತೆ ಒಟ್ಟು 599 ಅಂಕ ಪಡೆದಿದ್ದರು. ನಂತರ ಉತ್ತರ ಪತ್ರಿಕೆ ಪರಿಶೀಲಿಸಿ ಮರು ಮೌಲ್ಯಮಾಪನಕ್ಕೆ ಕಳುಹಿಸಲಾಗಿತ್ತು. ಇದರಲ್ಲಿ ವಿಜ್ಞಾನ ಒಂದರಲ್ಲಿಯೇ 13 ಅಂಕ ಹೆಚ್ಚುವರಿಯಾಗಿ ಪಡೆದು ಕೊಂಡು 612 ಅಂಕ ಪಡೆದಿದ್ದಾರೆ. ಇದರಿಂದಾಗಿ ತಾಲೂಕಿಗೆ 2 ಸ್ಥಾನ ಪಡೆದುಕೊಂಡು, ಜಿಲ್ಲೆಗೆ 3ನೇ ಸ್ಥಾನ ಹಂಚಿಕೊಂಡಿದ್ದಾರೆ.

ಅರ್ವತ್ತೋಕ್ಲು ವಿದ್ಯಾನಿಕೇತನ ಕಾಲೇಜಿನಲ್ಲಿ ಪಿಸಿಎಂಬಿ ಶಿಕ್ಷಣ ಪಡೆಯುತ್ತಿರುವ ಅಮೃತಾ ಮೆಡಿಕಲ್‍ನಲ್ಲಿ ಶಿಕ್ಷಣ ಮುಂದುವರಿಸುವ ಉತ್ಸಾಹದಲ್ಲಿದ್ದಾರೆ. ಇವರು ತಿತಿಮತಿ ಗ್ರಾಮದ ಚೆಪ್ಪುಡೀರ ರಂಜನ್ ಬೋಪಣ್ಣ ಮತ್ತು ಆರತಿ ದಂಪತಿ ಪುತ್ರಿ.