ರಾವಲ್‍ಕೋಟ್, ಜೂ. 8: ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಂದು ಭಾರತವನ್ನು ವಿಭಜನೆ ಮಾಡುತ್ತೇವೆ ಎಂದು 2008ರ ಮುಂಬೈ ಧಾಳಿ ಮಾಸ್ಟರ್ ಮೈಂಡ್ ಹಾಗೂ ನಿಷೇಧಿತ ಜಮಾದ್-ಉದ್-ದವಾ ಮುಖ್ಯಸ್ಥ ಹಫೀಜ್ ಸಯೀದ್‍ನ ಆಪ್ತ ಹಾಗೂ ಜೆಯುಡಿ ಸಂಚಾಲಕ ಬಶೀರ್ ಅಹ್ಮದ್ ಖರ್ಘಿ ಬಹಿರಂಗವಾಗಿ ಹೇಳಿಕೆ ನೀಡಿದ್ದಾನೆ. ಭಾರತ ಮತ್ತು ಅಮೇರಿಕಾದಲ್ಲಿ ಇಸ್ಲಾಮಿನ ಬಾವುಟವನ್ನು ಸ್ಥಾಪಿಸುತ್ತೇವೆ. ಭಾರತದ ಪ್ರಧಾನಿ ಮೋದಿಯನ್ನು ಹತ್ಯೆ ಮಾಡುತ್ತೇವೆ. ಭಾರತ ಹಾಗೂ ಇಸ್ರೇಲ್ ಅನ್ನು ವಿಭಜನೆ ಮಾಡುತ್ತೇವೆ. ಅತಿ ಹೆಚ್ಚು ಹುತಾತ್ಮರನ್ನು ಸೃಷ್ಟಿ ಮಾಡುತ್ತೇವೆ ಎಂದು ಹೇಳಿದ್ದಾನೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಪೂಂಚ್ ಜಿಲ್ಲೆಯ ಮಸೀದಿಯೊಂದರಲ್ಲಿ ನಡೆದ ರಂಜಾನ್‍ನ ಶುಕ್ರವಾರದ ನಮಾಜ್‍ನ ಭಾಷಣದ ವೇಳೆ ಬಶೀರ್ ಈ ರೀತಿ ಹೇಳಿದ್ದಾನೆ. ರಂಜಾನ್ ಜಿಹಾದ್‍ನ ತಿಂಗಳಾಗಿದ್ದು ಈ ತಿಂಗಳಿನಲ್ಲಿ ಹುತಾತ್ಮರಾದವರಿಗೆ ಸ್ವರ್ಗದ ಬಾಗಿಲು ತೆರೆದಿರುತ್ತದೆ. ನಮ್ಮ ಸೈನಿಕರು ಕಾಶ್ಮೀರದಲ್ಲಿ ಭಾರತದ ವಿರುದ್ಧ ಹೋರಾಟ ಮಾಡಿ ಜಿಹಾದ್ ಮಾಡುತ್ತಿದ್ದಾರೆ. ನಾವು ಕಾಶ್ಮೀರಕ್ಕೆ ಸ್ವತಂತ್ರ ಕೊಡಿಸಿ ಭಾರತವನ್ನು ನಾಶ ಮಾಡುತ್ತೇವೆ ಎಂದು ಹೇಳಿದ್ದಾನೆ.

ಪ್ರಧಾನಿ ಮೋದಿ ಹತ್ಯೆಗೆ ಸಂಚು

ನವದೆಹಲಿ, ಜೂ. 8: ಶ್ರೀಲಂಕಾದಲ್ಲಿ ದಿ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮೇಲೆ ನಡೆದ ಹತ್ಯೆ ಯತ್ನದ ಮಾದರಿಯಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡಲು ಮಾವೋವಾದಿಗಳು ಸಂಚು ರೂಪಿಸಿದ್ದರು ಎಂಬ ಆಘಾತಕಾರಿ ವಿಷಯವನ್ನು ಪೆÇಲೀಸರು ಬಹಿರಂಗಪಡಿಸಿದ್ದಾರೆ. ಪಶ್ಚಿಮ ಬಂಗಾಳ ಮೂಲದ ಮಾವೋವಾದಿ ಕಿಶನ್ ಎಂಬವರು ರೋನಾ ಜೇಕಬ್ ಎಂಬವರಿಗೆ ಪತ್ರ ಬರೆದಿದ್ದು, ಅದರಲ್ಲಿ ಶ್ರೀಲಂಕಾದಲ್ಲಿ ರಾಜೀವ್ ಗಾಂಧಿ ಅವರಿಗೆ ಗೌರವಾರ್ಥ ಪರೇಡ್ ನಡೆಯುತ್ತಿದ್ದಾಗ ಓರ್ವ ತನ್ನ ಕೈಯಲ್ಲಿದ್ದ ಬಂದೂಕಿನಿಂದ ರಾಜೀವ್ ಗಾಂಧಿ ಅವರ ತಲೆಗೆ ಗಂಭೀರವಾಗಿ ಹೊಡೆದಿದ್ದರು. ಇದೇ ರೀತಿಯಲ್ಲಿ ಮೋದಿ ಅವರ ಹತ್ಯೆ ಮಾಡುವ ಕುರಿತಂತೆ ಬರೆಯಲಾಗಿದೆ ಎಂದು ಪುಣೆ ಪೆÇಲೀಸರು ತಿಳಿಸಿದ್ದಾರೆ. ಯಾವದೇ ಸಭೆ-ಸಮಾರಂಭಗಳಲ್ಲಿ ಪ್ರಧಾನಿ ಮೋದಿ ಅವರು ಭಾಗಹಿಸಿದರೆ ಈ ವೇಳೆ ಅವರು ಸುಲಭವಾಗಿ ಜನರ ಜೊತೆ ಬೆರೆಯುತ್ತಾರೆ. ಅಲ್ಲಿ ನೆರೆದಿರುವಂತಹ ಅಭಿಮಾನಿಗಳ ಕೈ ಕುಲುಕುತ್ತಾರೆ ಇದನ್ನೇ ಬಳಸಿಕೊಂಡು ಕಿಶನ್ ಮೋದಿ ಅವರ ಹತ್ಯೆಗೆ ಸಂಚು ರೂಪಿಸಿದ್ದ ಎಂಬ ವಿಚಾರವನ್ನು ಪೆÇಲೀಸರು ಬಹಿರಂಗಪಡಿಸಿದ್ದಾರೆ. 2008ರ ಮುಂಬೈ ಸರಣಿ ಬಾಂಬ್ ಧಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಇತ್ತೀಚೆಗಷ್ಟೇ ಸಭೆಯೊಂದರಲ್ಲಿ ಪ್ರಧಾನಿ ಮೋದಿ ಅವರನ್ನು ಹತ್ಯೆ ಮಾಡುವ ಬೆದರಿಕೆ ಹಾಕಿದ್ದಾನೆ.

ಐಟಿ ಕಂಪೆನಿಗೆ ಬಾಂಬ್ ಕರೆ

ಬೆಂಗಳೂರು, ಜೂ. 8: ಬೆಂಗಳೂರಿನ ಬೆಳಂದೂರು ಸಮೀಪದ ದೇವರಬೀಸನಹಳ್ಳಿಯ ಔಟರ್ ರಿಂಗ್ ರೋಡ್‍ನಲ್ಲಿರುವ ಎಂಬೆಸ್ಸಿ ಟೆಕ್ ವಿಲ್ಭೆಜ್‍ನಲ್ಲಿ ಸಾಫ್ಟ್‍ವೇರ್ ಕಂಪೆನಿ ಶುಕ್ರವಾರ ಬಾಂಬ್ ಬೆದರಿಕೆ ಕರೆ ಬಂದಿದ್ದು, ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಎಂಬೆಸ್ಸಿ ಟೆಕ್ ವಿಲೇಜ್ ನಲ್ಲಿರುವ ಸಿಸ್ಕೋ ಸಾಫ್ಟ್‍ವೇರ್ ಕಚೇರಿಗೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಕೂಡಲೇ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ 7 ಸಾವಿರ ಸಿಬ್ಬಂದಿಯನ್ನು ಕಟ್ಟದಿಂದ ಹೊರಗೆ ಕಳುಹಿಸಲಾಯಿತು. ವೈಟ್ ಫೀಲ್ಡ್ ಉಪ ವಿಭಾಗದ ಹಿರಿಯ ಪೆÇಲೀಸ್ ಅಧಿಕಾರಿಗಳು, ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳದೊಂದಿಗೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಹಲವು ಗಂಟೆಗಳ ತಪಾಸಣೆಯ ನಂತರ ಇದೊಂದು ಹುಸಿ ಕರೆ ಎಂದು ತಿಳಿದು ಬಂದಿದೆ. ಸೈಬರ್ ಕ್ರೈಂ ಪೆÇಲೀಸರು ಈಗ ತನಿಖೆ ಆರಂಭಿಸಿದ್ದು, ಕರೆ ಮಾಡಿದ್ದ ವ್ಯಕ್ತಿಯ ಪತ್ತೆಗೆ ಜಾಲ ಬೀಸಿದ್ದಾರೆ. ದುಷ್ಕರ್ಮಿಯೊಬ್ಬ ಇಂಟರ್‍ನೆಟ್ ಕರೆ ಮಾಡಿ, ಹತ್ತು ನಿಮಿಷಗಳಲ್ಲಿ ಕಚೇರಿ ಸ್ಫೋಟಿಸುವದಾಗಿ ಬೆದರಿಕೆ ಹಾಕಿದ್ದ. ಆತ ಹಿಂದಿಯಲ್ಲಿ ಮಾತನಾಡಿದ್ದ ಎಂದು ಪೆÇಲೀಸರು ತಿಳಿಸಿದ್ದಾರೆ.

ಅತೃಪ್ತರಿಂದ ರಾಜೀನಾಮೆಗೆ ಚಿಂತನೆ

ಬೆಳಗಾವಿ, ಜೂ. 8: ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದ ಹಿನ್ನೆಲೆ ಹಲವು ಶಾಸಕರು ತೀವ್ರವಾಗಿ ಅಸಮಾಧಾನಗೊಂಡಿದ್ದಾರೆ. ಇನ್ನು ಬೆಳಗಾವಿಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ, ಶೀರ್ಘವೇ ಎಐಸಿಸಿ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡುವದಾಗಿ ಹೇಳಿದ್ದಾರೆ. ತಾ. 11 ರಂದು ಸಭೆ ನಡೆಸಿ ತಮ್ಮ ರಾಜೀನಾಮೆ ನೀಡುವ ಕುರಿತಂತೆ ತೀರ್ಮಾನ ಪ್ರಕಟಿಸುವದಾಗಿ ಹೇಳಿದ್ದಾರೆ. ನನ್ನ ವಿರೋಧಿಗಳು ಬೆಂಗಳೂರು ಹಾಗೂ ದೆಹಲಿಯಲ್ಲೂ ಇದ್ದಾರೆ. ನನಗೆ ಬೇಕು ಅಂತಲೆ ಸಚಿವ ಸ್ಥಾನವನ್ನು ತಪ್ಪಿಸಿದ್ದಾರೆ. ನನಗೆ ಸಚಿವ ಸ್ಥಾನ ತಪ್ಪಿಸಿದವರು ಯಾರೆಂಬದು ನನಗೆ ಗೊತ್ತು. ಅದನ್ನು ಇನ್ನು ಒಂದು ವಾರದಲ್ಲಿ ಬಹಿರಂಗಪಡಿಸುತ್ತೇನೆ ಎಂದು ಹೇಳಿದ್ದಾರೆ. ಸದ್ಯ ಕಾಂಗ್ರೆಸ್‍ನಲ್ಲಿ ಅತೃಪ್ತ ಶಾಸಕರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು ಎಂ.ಬಿ. ಪಾಟೀಲ್ ನಂತರ ಇದೀಗ ಸತೀಶ್ ಜಾರಕಿಹೊಳಿ ಪಕ್ಷದ ವಿರುದ್ಧ ತಿರುಗಿ ಬಿದ್ದಿದ್ದಾರೆ.