ಮಡಿಕೇರಿ, ಜೂ. 7: ಶಿಕ್ಷಕರ ಮತ್ತುಪದವಿದರ ಕ್ಷೇತ್ರದ ಚುನಾವಣೆ ತಾ. 8ರಂದು (ಇಂದು) ನಡೆಯಲಿದ್ದು, ಶಾಸಕ ಕೆ.ಜಿ .ಬೋಪಯ್ಯ ಅವರು ಮಡಿಕೇರಿಯ ಸಂತ ಜೋಸೆಫರ ಶಾಲೆ, ಸಂತ ಮೈಕಲರ ಶಾಲೆ, ರಾಜರಾಜೇಶ್ವರಿ ವಿದ್ಯಾ ಸಂಸ್ಥೆ, ಜೂನಿಯರ್ ಕಾಲೇಜು, ಟೌನ್ ಬ್ಯಾಂಕ್, ಡಿಸಿಸಿ ಬ್ಯಾಂಕ್ ಮುಂತಾದ ಕಡೆ ಪ್ರಚಾರ ನಡೆಸಿದರು. ಇವರೊಂದಿಗೆ ಮಡಿಕೇರಿ ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಜೈನಿ ಪಕ್ಷದ ಹಿರಿಯ ಮುಖಂಡರಾದ ಬೆಲ್ಲು ಸೋಮಯ್ಯ, ಬಿ.ಕೆ. ಅರುಣಕುಮಾರ್, ಜಗದೀಶ್, ಉಮೇಶ್ ಸುಬ್ರಮಣಿ, ಕನ್ನಂಡ ಸಂಪತ್ ಮುಂತಾದವರು ಪಾಲ್ಗೊಂಡಿದ್ದರು.

ಸೋಮವಾರಪೇಟೆ: ತಾ.8ರಂದು ನಡೆಯಲಿರುವ ವಿಧಾನಪರಿಷತ್ ನೈರುತ್ಯ ಶಿಕ್ಷಕರು ಮತ್ತು ಪದವೀಧರರ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿಗಳಾದ ಕೆ.ಕೆ.ಮಂಜುನಾಥ್‍ಕುಮಾರ್ ಮತ್ತು ಎಸ್.ಪಿ.ದಿನೇಶ್ ಅವರುಗಳ ಪರವಾಗಿ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ.ಲೋಕೇಶ್‍ಕುಮಾರ್, ರಾಜ್ಯ ಪರಿಶಿಷ್ಟಜಾತಿ ಇಲಾಖೆ ಸಂಚಾಲಕ ಬಿ.ಈ.ಜಯೇಂದ್ರ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೆ.ಎ.ಆದಮ್ ಅವರುಗಳು ಬೆಟ್ಟದಳ್ಳಿಯಲ್ಲಿ ಮತಯಾಚಿಸಿದರು.