ಮಡಿಕೇರಿ, ಜೂ. 7: ಮುಂಗಾರು ಮಳೆ ಸಂದರ್ಭದಲ್ಲಿ ಪ್ರಕೃತಿ ವಿಕೋಪದಿಂದ ಉಂಟಾಗಬಹುದಾದ ಭೂಕುಸಿತ, ಸಂಚಾರಕ್ಕೆ ಅಡ್ಡಿ, ನಾಗರಿಕ ಕಾರ್ಯಗಳು ಮತ್ತು ಸಂತ್ರಸ್ಥರನ್ನು ಸ್ಥಳಾಂತರ ಮಾಡುವದು, ಮತ್ತಿತರ ಕಾರ್ಯಗಳನ್ನು ಸಮರ್ಪಕವಾಗಿ ನಿಬಾಯಿಸಲು ತಹಶೀಲ್ದಾರರ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಕೆಳ ಹಂತದ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.ಮಡಿಕೇರಿ ತಾಲೂಕು ಭಾಗಮಂಡಲ, ತಲಕಾವೇರಿ, ನಾಪೋಕ್ಲು, ಬೊಳಿಬಾಣೆ ಮತ್ತು ಅಯ್ಯಂಗೇರಿ ವ್ಯಾಪ್ತಿಗೆ ತಹಶೀಲ್ದಾರರು (ತಂಡದ ಮುಖ್ಯಸ್ಥರು), ಸಹಾಯಕ ಕಾರ್ಯ ಇಂಜಿನಿಯರ್ ಜಿ.ಪಂ. ಪಂಚಾಯತ್, ಸೆಸ್ಕ್ ಸಹಾಯಕ ಎಂಜಿನಿಯರ್, ಹೋಬಳಿ ಕೇಂದ್ರದ ಪರಿವೀಕ್ಷಕರು, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು, ವಲಯ ಅರಣ್ಯಾಧಿಕಾರಿಗಳು, ಅಗ್ನಿಶಾಮಕ ಠಾನಾಧಿಕಾರಿ ಹಾಗೂ ಪೊಲೀಸ್ ನಿರೀಕ್ಷಕರನ್ನು ನಿಯೋಜಿಸಲಾಗಿದೆ. (ದೂ.08272-225691, ಮೊ.9448870811).

ಮಡಿಕೇರಿ ನಗರಸಭಾ ವ್ಯಾಪ್ತಿಯ ಮಂಗಳಾದೇವಿ ನಗರ, ಮಲ್ಲಿಕಾರ್ಜುನ ನಗರ ಮತ್ತು ಪುಟಾಣಿ ನಗರ ವ್ಯಾಪ್ತಿಗೆ ಪೌರಾಯುಕ್ತರು (ತಂಡದ ಮುಖ್ಯಸ್ಥರು), ಸೆಸ್ಕ್ ಸಹಾಯಕ ಎಂಜಿನಿಯರ್, ಕಂದಾಯ ಅಧಿಕಾರಿ (ನಗರಸಭೆ), ಅಗ್ನಿಶಾಮಕ ಠಾಣಾಧಿಕಾರಿ. ನಗರಸಭೆ ಕಚೇರಿ 08272-228323, 220579, ನಗರಸಭೆ ನಿಯಂತ್ರಣ ಕೊಠಡಿ 220111,

(ಮೊದಲ ಪುಟದಿಂದ)ಮೊ. 9886418888, 9743132759). ವೀರಾಜಪೇಟೆ ತಾಲೂಕಿನ ಬೇತ್ರಿ, ಕರಡಿಗೋಡು, ಕುಟ್ಟ ಗ್ರಾ.ಪಂ. ವ್ಯಾಪ್ತಿಯ ಪೂಜಿಕಲ್ಲು, ನಿಟ್ಟೂರು ಗ್ರಾ.ಪಂ. ವ್ಯಾಪ್ತಿಯ ಲಕ್ಷ್ಮಣ ತೀರ್ಥ, ಕೊಡಂಗೇರಿ, ಗುಹ್ಯ ಕೀರೆಹೊಳೆ, ಬಲ್ಯಮಂಡೂರು ಹರಿಹರ ಸೇತುವೆ ವ್ಯಾಪ್ತಿಗೆ ತಹಶೀಲ್ದಾರರು (ತಂಡದ ಮುಖ್ಯಸ್ಥರು), ಎಇಇ ಲೋಕೋಪ ಯೋಗಿ ಇಲಾಖೆ, ಸೆಸ್ಕ್ ಸಹಾಯಕ ಇಂಜಿನಿಯರ್, ಕಂದಾಯ ಪರಿವೀಕ್ಷಕರು, ಗ್ರಾ.ಪಂ. ಪಿಡಿಓ, ವಲಯ ಅರಣ್ಯಾಧಿಕಾರಿ, ಅಗ್ನಿಶಾಮಕ ಠಾಣಾಧಿಕಾರಿಗಳು, ಪೊಲೀಸ್ ನಿರೀಕ್ಷಕರು. (ದೂ.08274-249053, ಮೊ 9113027480).

ಸೋಮವಾರಪೇಟೆ ತಾಲೂಕಿನ ನೆಲ್ಯಹುದಿಕೇರಿ, ಬೆಟ್ಟದಕಾಡು ವ್ಯಾಪ್ತಿಗೆ ತಹಶೀಲ್ದಾರರು (ತಂಡದ ಮುಖ್ಯಸ್ಥರು), ಎಇಇ ಲೋಕೋಪ ಯೋಗಿ ಇಲಾಖೆ, ಸೆಸ್ಕ್ ಸಹಾಯಕ ಎಂಜಿನಿಯರ್, ಕಂದಾಯ ಪರಿವೀಕ್ಷಕರು, ಗ್ರಾ.ಪಂ. ಪಿಡಿಓ, ವಲಯ ಅರಣ್ಯಾಧಿಕಾರಿ, ಅಗ್ನಿಶಾಮಕ ಠಾಣಾಧಿಕಾರಿ, ಪೊಲೀಸ್ ನಿರೀಕ್ಷಕರು. (ದೂ.08276-282045, ಮೊ.9480073838).

ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಾರ್ವಜನಿಕರಿಗೆ, ವಾಹನ ಸಂಚಾರಕ್ಕೆ ಅಡಚಣೆ ಉಂಟಾದಲ್ಲಿ ಕೂಡಲೇ ಕ್ರಮ ಕೈಗೊಳ್ಳುವದು, ಸಾರ್ವಜನಿಕರಿಂದ ಮಾಹಿತಿ ಬಂದಲ್ಲಿ ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ಸೂಚನೆ ನೀಡಿದ್ದಾರೆ.

ತಹಶೀಲ್ದಾರರು ಮತ್ತು ತಾ.ಪಂ. ಇಓ ಅವರು ತಾಲೂಕು ವ್ಯಾಪ್ತಿಯಲ್ಲಿ ಮೇಲುಸ್ತುವಾರಿ ನಡೆಸಿ ಸಾರ್ವ ಜನಿಕರಿಗೆ ಯಾವದೇ ರೀತಿಯಲ್ಲಿ ತೊಂದರೆ ಉಂಟಾಗದಂತೆ ನೋಡಿ ಕೊಳ್ಳುವದು. ಜೊತೆಗೆ ಉಪ ವಿಭಾಗಾಧಿಕಾರಿ ಅವರು ಜಿಲ್ಲಾ ವ್ಯಾಪ್ತಿಯಲ್ಲಿ ಮೇಲುಸ್ತುವಾರಿ ನೋಡಿಕೊಳ್ಳುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.