ಮಡಿಕೇರಿ, ಜೂ. 6: ಕರ್ನಾಟಕ ವಿಧಾನ ಪರಿಷತ್ತಿನ ನೈರುತ್ಯ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರದಿಂದ ನಡೆಯುವ ಚುನಾವಣೆಯನ್ನು ಸುಸೂತ್ರವಾಗಿ ನಡೆಸಲು ಹಾಗೂ ಶಾಂತಿಯುತ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಕರ್ನಾಟಕ ಅಬಕಾರಿ ನಿಯಮ 1967ರ ಕಾಯ್ದೆ 10 ಬಿ ರಡಿಯಂತೆ ತಾ. 6 ರ ಸಂಜೆ 5 ಗಂಟೆಯಿಂದ ತಾ. 8 ರ ಮಧ್ಯರಾತ್ರಿ 12 ಗಂಟೆ ವರೆಗೆ ಜಿಲ್ಲೆಯಾದ್ಯಂತ ಎಲ್ಲಾ ವಿಧದ ಮದ್ಯ ಅನಧೀಕೃತ ಸಾಗಾಣಿಕೆ, ಶೇಖರಣೆ ಮತ್ತು ಎಲ್ಲಾ ರೀತಿಯ ಅಂಗಡಿ, ಬಾರ್ ಮತ್ತು ರೆಸ್ಟೋರೆಂಟ್, ಕ್ಲಬ್, ಹೊಟೇಲ್‍ಗಳಲ್ಲಿ ಎಲ್ಲಾ ವಿಧದ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಆದೇಶ ಹೊರಡಿಸಿದ್ದಾರೆ.

ಆರ್ಮಿ ಕ್ಯಾಂಟೀನ್: ಜಿಲ್ಲಾಧಿಕಾರಿಗಳ ಆದೇಶದಂತೆ ಆರ್ಮಿ ಕ್ಯಾಂಟೀನ್‍ನಲ್ಲಿಯೂ ತಾ. 7 ಹಾಗೂ 8ರಂದು ಮದ್ಯ ಮಾರಾಟವಿರುವದಿಲ್ಲ. ಇಲ್ಲಿ ಕಾರ್ಡ್‍ದಾರರಿಗೆ ಕೇವಲ ಸರಕುಗಳನ್ನು ಮಾತ್ರ ವಿತರಿಸಲಾಗುವದು ಎಂದು ಕ್ಯಾಂಟೀನ್ ಪ್ರಕಟಣೆ ತಿಳಿಸಿದೆ.