ಸಿದ್ದಾಪುರ, ಜೂ. 6: ಜಿಲ್ಲೆಯಲ್ಲಿ ತಲೆದೋರಿರುವ ಕಾಡಾನೆ ಹಾವಳಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ತಾ. 8 ರಂದು ಮಡಿಕೇರಿ ಅರಣ್ಯಭವನದಲ್ಲಿ ಅರಣ್ಯಾಧಿಕಾರಿ ಗಳೊಂದಿಗೆ ಸಭೆ ನಡೆಸಿ ಚರ್ಚಿ ಸುವದಾಗಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದ್ದಾರೆ.ನಂಜರಾಯಪಟ್ಟಣ, ರಂಗ ಸಮುದ್ರ, ವಾಲ್ನೂರು-ತ್ಯಾಗತ್ತೂರು ವ್ಯಾಪ್ತಿಯ ಬಿಜೆಪಿ ಸಮಿತಿ ವತಿಯಿಂದ ಏರ್ಪಡಿಸಿದ್ದ ಅಭಿನಂದನಾ ಸಭೆಯಲ್ಲಿ ಕಾರ್ಯಕರ್ತರ ಅಹವಾಲು ಸ್ವೀಕರಿಸಿ ಶಾಸಕರು ಮಾತನಾಡಿದರು. ಆರ್‍ಎಂಸಿ ಸದಸ್ಯ ಜತ್ತ ವಿಜಯ ಅವರು ಈ (ಮೊದಲ ಪುಟದಿಂದ) ವ್ಯಾಪ್ತಿಯಲ್ಲಿ ಕಾಡಾನೆಗಳು ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿದ್ದು, ಹಾಡ ಹಗಲೇ ಸಂಚರಿಸುತ್ತಿರುತ್ತವೆ. ಕಂದಕ ನಿಷ್ಪ್ರಯೊಜಕವಾಗಿದ್ದು, ಶಾಶ್ವತ ತಡೆಗೆ ಯೋಜನೆ ರೂಪಿಸಬೇಕೆಂದು ಕೋರಿದರಲ್ಲದೆ, ಸಮೀಪದ ತೋಟಕ್ಕೆ ಶಾಸಕರನ್ನು ಕರೆದೊಯ್ದು ಕಾಡಾನೆ ಇರುವಿಕೆಯನ್ನು ತೋರಿಸಿದರು.ಈ ಸಂದರ್ಭ ಶಾಸಕರು ಅರಣ್ಯ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಆನೆ ಹಾವಳಿ ತಡೆಗಟ್ಟುವ ಸಂಬಂಧ ತಾ. 8 ರಂದು ಅರಣ್ಯ ಭವನದಲ್ಲಿ ಸಭೆ ಏರ್ಪಡಿಸುವಂತೆ ಸೂಚಿಸಿದರು.

ಇದೇ ಸಂದರ್ಭ ಗ್ರಾಮಸ್ಥರು ಸಿದ್ದಾಪುರ - ಕುಶಾಲನಗರ ಮಾರ್ಗವಾಗಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬೆಳಿಗ್ಗೆ ಸರಕಾರಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದರು. ತಾ.ಪಂ. ಸದಸ್ಯ ವಿಜು ಚಂಗಪ್ಪ, ಗ್ರಾ.ಪಂ. ಸದಸ್ಯರುಗಳಾದ ಟಿ.ಕೆ. ಸುಮೇಶ್, ನವೀನ್, ಮಾಜಿ ಅಧ್ಯಕ್ಷ ಮನುಮಹೇಶ್, ಬಿಜೆಪಿ ಅಧ್ಯಕ್ಷ ಸುರೇಶ್, ರಂಗಪ್ಪ, ದೇವಯ್ಯ. ಅ.ಸು. ಬೋಪಣ್ಣ ಇನ್ನಿತರರಿದ್ದರು. ಇದೇ ಸಂದರ್ಭ ಮುಖ್ಯ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು.

- ಅಂಚೆಮನೆ ಸುಧಿ