ಸೋಮವಾರಪೇಟೆ, ಜೂ. 5: ಇಲ್ಲಿನ ಹೈಟೆಕ್ ಮಾರುಕಟ್ಟೆ ದುರಸ್ತಿ ಪಡಿಸುವ ನೆಪದಲ್ಲಿ ಲಕ್ಷಾಂತರ ರೂಪಾಯಿಗಳನ್ನು ದುರುಪಯೋಗ ಮಾಡಲಾಗುತ್ತಿದೆ ಎಂದು ಇಂದಿರಾ ಗಾಂಧಿ ಅಭಿಮಾನಿಗಳ ಸಂಘ ಆರೋಪಿಸಿದೆ.

ಕಳೆದ ಮೂರು ವರ್ಷಗಳಿಂದ ಹೈಟೆಕ್ ಮಾರುಕಟ್ಟೆಯನ್ನು ದುರಸ್ತಿಪಡಿಸಲಾಗಿದೆ ಎಂದು ಅಭಿಯಂತರ ವೀರೇಂದ್ರ ಸಮಜಾಯಿಷಿಕೆ ನೀಡುತ್ತಿದ್ದು, ದುರಸ್ತಿಯಾದ ನಂತರವೂ ಮಾರುಕಟ್ಟೆ ಸೋರುತ್ತಿದೆ. ಒಳ ಭಾಗದಲ್ಲಿ ನೀರು ಸಂಗ್ರಹವಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಂಘದ ಅಧ್ಯಕ್ಷ ನಾಗರಾಜ್ ಆಗ್ರಹಿಸಿದ್ದಾರೆ.