ಮಡಿಕೇರಿ, ಜೂ. 4: ಮಡಿಕೇರಿ ಅರಣ್ಯ ವಿಭಾಗದ ವಿವಿಧ ಅರಣ್ಯ ವಲಯಗಳಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸ್ವಚ್ಛತಾ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ವಿವರ ಇಂತಿದೆ: ತಾ. 6 ರಂದು ಮಡಿಕೇರಿ ಅರಣ್ಯ ವಲಯದ ವತಿಯಿಂದ ಮಡಿಕೇರಿಯಿಂದ ಸುಂಟಿಕೊಪ್ಪ ಪಟ್ಟಣದವರೆಗೆ, ತಾ. 7 ರಂದು ಕುಶಾಲನಗರ ಅರಣ್ಯ ವಲಯದ ವತಿಯಿಂದ ಆನೆಕಾಡಿನಿಂದ ಸುಂಟಿಕೊಪ್ಪ ಪಟ್ಟಣದವರೆಗೆ, ತಾ. 8 ರಂದು ಸೋಮವಾರಪೇಟೆ ಅರಣ್ಯ ವಲಯದ ವತಿಯಿಂದ ಬೇಲೂರು ಬಾಣೆ ಹಾಗೂ ಸೋಮವಾರಪೇಟೆ ಪಟ್ಟಣ ಪ್ರದೇಶದವರೆಗೆ, ಮತ್ತು ಶನಿವಾರಸಂತೆ ಅರಣ್ಯ ವಲಯದ ವತಿಯಿಂದ ಶನಿವಾರಸಂತೆ ಸಾರ್ವಜನಿಕ ಆಸ್ಪತ್ರೆಯಿಂದ ಸರ್ಕಾರಿ ಬಸ್ ನಿಲ್ದಾಣದವರೆಗೆ, ತಾ. 11 ರಂದು ಭಾಗಮಂಡಲ ಅರಣ್ಯ ವಲಯದ ವತಿಯಿಂದ ತಲಕಾವೇರಿಯಿಂದ ಭಾಗಮಂಡಲದವರೆಗೆ, ತಾ. 13 ರಂದು ಸಂಪಾಜೆ ಅರಣ್ಯ ವಲಯದ ವತಿಯಿಂದ ಸಂಪಾಜೆಯಿಂದ ದೇವರಕೊಲ್ಲಿಯವರೆಗೆ ಆಯಾ ದಿನದಂದು ಬೆಳಗ್ಗೆ 9 ಗಂಟೆಯಿಂದ ಸ್ವಚ್ಛತಾ ಆಂದೋಲನ ಕಾರ್ಯಕ್ರಮ ನಡೆಯಲಿದೆ.