ಮಡಿಕೇರಿ, ಜೂ. 4: ಮುಂಗಾರು ಪ್ರವೇಶಿಸುವ ಮುನ್ನವೇ ನಗರದ ರಸ್ತೆಗಳು ಹದಗೆಟ್ಟು, ಕೆಸರಿನ ಹೊಂಡಗಳು ಗೋಚರಿಸತೊಡಗಿವೆ. ರಾಜಾಸೀಟ್ ಮಾರ್ಗವಾಗಿ ಆಗಮಿಸುವ ಒಂದೆಡೆ ರಸ್ತೆ ಕೊರೆದು ಪ್ರಪಾತ ಸೃಷ್ಟಿಯಾಗಿದೆ. ಇಲ್ಲಿನ ಗೌಳಿಬೀದಿ ಸಹಿತ ಅನೇಕ ಕಡೆ ಮಳೆಯ ನಡುವೆ ದ್ವಿಚಕ್ರ ವಾಹನ ಸಹಿತ ಭಾರೀ ವಾಹನಗಳು ತೊಂದರೆಗೆ ಸಿಲುಕುವಂತಾಗಿದೆ. ನಿನ್ನೆ ಹಗಲು ಟ್ಯಾಂಕರ್‍ವೊಂದು ಸಿಲುಕಿಕೊಂಡು ಜೆಸಿಬಿ ಯಂತ್ರದ ಸಹಾಯದಿಂದ ಎಳೆದು ಅಪಾಯ ತಪ್ಪಿಸಿದ ದೃಶ್ಯ ಎದುರಾಯಿತು.

ಇನ್ನು ಕೆಲವು ದಿನಗಳ ಹಿಂದೆ ಕೋಟೆ ಮಾರಿಯಮ್ಮ ದೇವಾಲಯ ಬಳಿ, ಓಂಕಾರೇಶ್ವರ ದೇವಾಲಯ ಹಿಂಭಾಗ ರಸ್ತೆಯಲ್ಲಿ ಒಳಚರಂಡಿ ಕಾಮಗಾರಿ (ಮೊದಲ ಪುಟದಿಂದ) ಪೂರೈಸಿ ರಸ್ತೆ ಅಭಿವೃದ್ಧಿ ಪಡಿಸಿದ್ದು, ಪ್ರಸಕ್ತ ಮಳೆಯಲ್ಲೇ ಕೊಚ್ಚಿ ಹೋಗಿವೆ. ಮಾತ್ರವಲ್ಲದೆ ಓಂಕಾರೇಶ್ವರ ದೇವಾಲಯ ಬಳಿ ರಸ್ತೆಯಲ್ಲೇ ಹೊಂಡ ನಿರ್ಮಾಣಗೊಂಡು ಕೊಡವ ಸಮಾಜ ಇಳಿಜಾರು ರಸ್ತೆಯಲ್ಲಿ ಪ್ರಾಣಕ್ಕೆ ಕುತ್ತು ತರುವ ದೃಶ್ಯ ಎದುರಾಗಿದೆ. ಇಂತಹ ಅಪಾಯದ ಸನ್ನಿವೇಶ ಇಲ್ಲಿನ ಮಲ್ಲಿಕಾರ್ಜುನ ನಗರ ಹಾಗೂ ಇತರೆಡೆಗಳಲ್ಲೂ ಗೋಚರಿಸುವಂತಾಗಿದೆ. ಅಪಾಯ ಎದುರಾಗುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚರ ವಹಿಸಿ ಮುಂಜಾಗ್ರತ ಕ್ರಮ ಕೈಗೊಳ್ಳಬೇಕಿದೆ.

-ದಶರಥ