*ಗೋಣಿಕೊಪ್ಪಲು, ಜೂ. 4 : ತಿತಿಮತಿ ವಲಯ ಅರಣ್ಯಾಧಿಕಾರಿಗಳ ಕಚೇರಿಯಿಂದ ಪ್ರತಿ ವರ್ಷ ಮಳೆಗಾಲದಲ್ಲಿ ನೀಡುವ ಸಸಿಗಳನ್ನು ಸಾರ್ವಜನಿಕರಿಗೆ ಈ ಬಾರಿಯೂ ನೀಡಲಾಗುವದು. ಸಸಿ ಬೆಳೆಸುವ ಯೋಜನೆ ಅಡಿಯಲ್ಲಿ ವೀರಾಜಪೇಟೆ ಪ್ರಾದೇಶಿಕ ವಿಭಾಗ ತಿತಿಮತಿ ವಲಯದ ಮಜ್ಜಿಗೆಹಳ್ಳ ಸಸ್ಯ ಕ್ಷೇತ್ರದಲ್ಲಿ ಸಾರ್ವಜನಿಕರು ಹಾಗೂ ರೈತರಿಗೆ ರಿಯಾಯಿತಿ ದರದಲ್ಲಿ ತಾ. 6 ರಿಂದ ವಿತರಿಸಲಾಗುವದು. ಪ್ರತಿ ದಿನ 75 ಫಲಾನುಭವಿಗಳಿಗೆ ಮಾತ್ರ ವಿತರಿಸಲಾಗುವದು, ಅರ್ಹ ಫಲಾನುಭವಿಗಳು ತಿತಿಮತಿ ವಲಯ ಅರಣ್ಯಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸುವಂತೆ ಅರಣ್ಯಾಧಿಕಾರಿಗಳು ಕೋರಿದ್ದಾರೆ. ಹೆಚ್ಚಿನ ಮಾಹಿತಿಗೆ 08274-263424 ರಲ್ಲಿ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.