ಗೋಣಿಕೊಪ್ಪ ವರದಿ, ಜೂ. 4: ಹುಲಿ ಧಾಳಿಗೆ ಹಸು ಬಲಿಯಾಗಿರುವ ಘಟನೆ ಬೆಸಗೂರು ಗ್ರಾಮದಲ್ಲಿ ನಡೆದಿದೆ. ಅಲ್ಲಿನ ಕಾಫಿ ಬೆಳೆಗಾರ ಮಚ್ಚಮಾಡ ನಟೇಶ್ ಎಂಬವರಿಗೆ ಸೇರಿದ ಹಸುವನ್ನು ಕಳೆದ ರಾತ್ರಿ ಕೊಂದು ಹಾಕಿದೆ. ರಾತ್ರಿ ಕೊಟ್ಟಿಗೆಗೆ ಹಸು ಬಾರದಿದ್ದ ಕಾರಣ ಹಸುವಿನ ಮಾಲೀಕರು ಹುಡುಕಾಟ ನಡೆಸಿದಾಗ ಅಲ್ಲಿನ ಅರಮಣಮಾಡ ಮನು ಎಂಬವರ ತೋಟದಲ್ಲಿ ಹಸುವಿನ ಮೃತದೇಹ ಇಂದು ಬೆಳಿಗ್ಗೆ ಪತ್ತೆಯಾಗಿದೆ. ಹಸು ಮೇಯಲು ತೋಟಕ್ಕೆ ತೆರಳಿದ್ದ ಸಂದರ್ಭ ಧಾಳಿ ನಡೆದಿದೆ. ಸ್ಥಳಕ್ಕೆ ಪೊನ್ನಂಪೇಟೆ ಅರಣ್ಯ ವಲಯ ಅಧಿಕಾರಿ ಗಂಗಾಧರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.