ಸಿದ್ದಾಪುರ, ಜೂ. 4 : ಸಿದ್ದಾಪುರದ ಗುಹ್ಯ, ಕರಡಿಗೋಡು, ಇಂಜಲಗರೆ ಹಾಗೂ ನೆಲ್ಯಹುದಿಕೇರಿ ಸಮೀಪದ ಅತ್ತಿಮಂಗಲ, ಬಳಂಜಿಕೆರೆ, ಅಭ್ಯತ್ ಮಂಗಲ ಗ್ರಾಮ ವ್ಯಾಪ್ತಿಯ, ಕಾಫಿ ತೋಟಗಳಲ್ಲಿ ನಿರಂತರವಾಗಿ, ಹಾಡಹಗಲೇ ಕಾಡಾನೆಗಳ ಹಿಂಡು ಪ್ರತ್ಯಕ್ಷಗೊಂಡು ವಾಹನ ಸವಾರರಿಗೆ ಹಾಗೂ ಸ್ಥಳೀಯ ತೋಟ ಕಾರ್ಮಿಕರಲ್ಲಿ ಆತಂಕ ಸೃಷ್ಟಿ ಮಾಡಿದೆ. ಕಾಡಾನೆ ಹಾವಳಿಯನ್ನು ತಡೆಗಟ್ಟಲು ಅರಣ್ಯ ಇಲಾಖೆಯು ಸೂಕ್ತ ಕ್ರಮ ಕೈಗೊಳ್ಳದೇ ಕಾಲಹರಣ ಮಾಡುತ್ತಿದೆ ಎಂದು ಸ್ಥಳೀಯ ಕಾಫಿ ಬೆಳೆಗಾರರು ಹಾಗೂ ಸ್ಥಳೀಯ ನಿವಾಸಿಗಳು ಅರಣ್ಯ ಇಲಾಖೆಯ ವಿರುದ್ಧ

ಸಿದ್ದಾಪುರ ತೋಟಗಳಲ್ಲಿ ಕಾಡಾನೆ ಹಿಂಡು...

ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ ಜನರು ಬಡತನ, ಸಾಲ, ಅನಾರೋಗ್ಯದಿಂದ ಕಂಗಾಲಾಗಿದ್ದ ಕಾಲ ತುಸು ದೂರವಾಗಿರುವ ಹಿನ್ನೆಲೆಯಲ್ಲಿ ಇದೀಗ ಜಿಲ್ಲೆಯ ಜನರು ನಿರಂತರವಾಗಿ ಕಾಡಾನೆ ಹಾವಳಿ ಯಿಂದ ಕಂಗಾಲಾಗಿದ್ದು, ಪ್ರತಿ ದಿನ ಜೀವ ಭಯದಿಂದ ಓಡಾಡುವ ಪರಿಸ್ಥಿತಿ ಎದುರಾಗಿದೆ.

ಒಂದೆಡೆ ಬೆಳೆಗೆ ಸೂಕ್ತ ಬೆಲೆಯಿಲ್ಲ, ಕಾಡಾನೆಯಿಂದ ತಮ್ಮ ಬೆಳೆಗಳನ್ನು ಸಂರಕ್ಷಿಸಲು ಹರಸಾಹಸ ಪಡುವಂತಾಗಿದೆ. ಕಾಡಾನೆಗಳ ಹಿಂಡು ಕಾಫಿ ತೋಟ ಗಳಲ್ಲಿ ಬೀಡು ಬಿಡುವ ಸಂದರ್ಭದಲ್ಲಿ ಆ ಪ್ರದೇಶದಲ್ಲಿ ಕನಿಷ್ಟ 40 ರಿಂದ 70 ರಷ್ಟು ಕಾಫಿ, ಕಾಳು ಮೆಣಸು ಬಳ್ಳಿಗಳು, ಅಡಿಕೆ ಎಂಬಿತ್ಯಾದಿ ಬೆಳೆಗಳು ನಾಶವಾಗು ತ್ತವೆ. ತೋಟ ಕಾರ್ಮಿಕರು ಕೆಲಸಕ್ಕೆ ಬರಲು ಹಿಂಜರಿಯುತ್ತಾರೆ. ಈ ಹಿನ್ನೆಲೆಯಲ್ಲಿ ಬೆಳೆ ಬೆಳೆಗಾರನ ಕೈಸೇರದೆ ನಾನಾ ರೀತಿಯಲ್ಲಿ ಮಣ್ಣು ಪಾಲಾಗುತ್ತಿದೆ ಎಂಬುದು ಬೆಳೆಗಾರರ ಅಳಲು.

ಒಂದು ತೋಟದಿಂದ ಇನ್ನೊಂದು ತೋಟಗಳಿಗೆ ಮುಖ್ಯ ರಸ್ತೆಯ ಮೂಲಕ ಲಗ್ಗೆ ಇಡುವ ಕಾಡಾನೆಗಳ ಹಿಂಡು ವಾಹನ ಸವಾರರನ್ನು ಸಂಕಷ್ಟಕ್ಕೀಡು ಮಾಡಿದೆ. ಕಾಡಾನೆಗಳಿಗೆ ಅಂಜಿ ವಾಹನ ಸವಾರರು ಹಾಗೂ ಕೆಲಸಕ್ಕೆ ತೆರಳುವವರು ಜೀವ ಭಯದಿಂದ ಹಿಂತಿರುಗಿ ಮನೆಗೆ ತೆರಳುವ ದೃಶ್ಯ ಇತ್ತೀಚೆಗೆ ಗೋಚರಿಸಲ್ಪಡುತ್ತಿರು ವದು ವಿಪರ್ಯಾಸವಾಗಿದೆ.

ನೆಲ್ಯಹುದಿಕೇರಿ ವ್ಯಾಪ್ತಿಯಲ್ಲಿ ಕೂಲಿ ಕಾರ್ಮಿಕರೇ ಹೆಚ್ಚಾಗಿ ವಾಸಿಸುತ್ತಿರುವ ಹಿನ್ನೆಲೆಯಲ್ಲಿ, ತೋಟ ಕಾರ್ಮಿಕರು ಕಾಡಾನೆ ಹಾವಳಿಯಿಂದ ಕೆಲಸಕ್ಕೆ ತೆರಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಫಿ üತೋಟದಲ್ಲಿ ಒಂದೆಡೆ ಕಾಡಾನೆ ಹಿಂಡು ಇನ್ನೊಂದೆಡೆ ಕಾರ್ಮಿಕರು ಪ್ರತಿ ದಿನ ಕಾಡಾನೆ ಧಾಳಿಯ ಭೀತಿ ಯಿಂದಲೇ ಕೆಲಸಕ್ಕೆ ತೆರಳುತ್ತಿದ್ದು, ಕಾಡಾನೆ ಹಾವಳಿಗೆ ಮುಕ್ತಿ ಯಾವಾಗ ಸಿಗಲಿದೆ ಎಂದು ಅರಣ್ಯ ಇಲಾಖೆ ಹಾಗೂ ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುವ ಸರದಿ ತೋಟ ಕಾರ್ಮಿಕರದ್ದಾಗಿದೆ.

ಇತ್ತೀಚಿನ ದಿನಗಳಲ್ಲಿ ಗ್ರಾಮ ದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಶಾಲಾ ವಿದ್ಯಾರ್ಥಿಗಳು ಹಾಗೂ ತೋಟ ಕಾರ್ಮಿಕರಿಗೆ ಕೆಲಸಕ್ಕೆ ತೆರಳಲು ಕೂಡ ಸಾಧ್ಯವಾಗದಂತಾ ಗಿದೆ. ಕಾಡಾನೆ ಹಾವಳಿ ನಿಯಂತ್ರಣಕ್ಕೆ ಅರಣ್ಯ ಇಲಾಖೆಯು ಶಾಶ್ವತವಾದ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಗ್ರಾಮಸ್ಥರು ಇಲಾಖೆಯ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಕಾಡಾನೆ ಹಾವಳಿ ತಡೆಗಟ್ಟಲು ಶಾಶ್ವತ ಕ್ರಮಕೈಗೊಳ್ಳುವವರೆಗೆ ಕಾಡಾನೆಗಳು ಹೆಚ್ಚಾಗಿರುವ ವ್ಯಾಪ್ತಿಯಲ್ಲಿ ಇಲಾಖಾ ಸಿಬ್ಬಂದಿಗಳನ್ನು ನೇಮಿಸಿ, ಕಾಡಾನೆ ಇರುವಿಕೆಯ ಕುರಿತು ಸಾರ್ವಜನಿಕರಿಗೆ ಎಚ್ಚರಿಕೆಯ ಸಂದೇಶಗಳನ್ನು ನೀಡುವ ಮೂಲಕ ಪ್ರಾಣ ಹಾನಿಯನ್ನು ತಪ್ಪಿಸಬೇಕೆಂದು ಆಗ್ರಹಿಸಿದ್ದಾರೆ.

ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ವೈಜ್ಞಾನಿಕ ರೀತಿಯಲ್ಲಿ ಅರಣ್ಯಕ್ಕೆ ಅಟ್ಟಬೇಕೆಂದು ಜಿಲ್ಲಾ ಜೆ.ಡಿ.ಎಸ್ ಅಧ್ಯಕ್ಷ ಸಂಕೇತ್ ಪೂವಯ್ಯ ಒತ್ತಾಯಿಸಿದ್ದಾರೆ. ಕಾಡಾನೆ ಹಾವಳಿಯಿಂದ ರೈತರು ಕಂಗಾಲಾಗಿದ್ದು, ಕಾರ್ಮಿಕರು ಕೂಡ ಭಯದಿಂದಲೇ ತೋಟದಲ್ಲಿ ಕೆಸಲ ಮಾಡಬೇಕಾದ ಪರಿಸ್ಥತಿ ನಿರ್ಮಾಣವಾಗಿದೆ. ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಕಾಡಾನೆಗಳನ್ನು ಕಾಡಿಗೆ ಅಟ್ಟಬೇಕೆಂದು ಒತ್ತಾಯಿಸಿದ್ದಾರೆ.