ವೀರಾಜಪೇಟೆ, ಜೂ. 5: ಮಲೆನಾಡು ಪ್ರದೇಶಗಳಲ್ಲಿ ಗಿಡ ಮರಗಳನ್ನು ಬೆಳೆಸುವ ಅವಶ್ಯಕತೆ ಇಲ್ಲ. ಇರುವ ಗಿಡ ಮರಗಳು ಹಾಗೂ ಪರಿಸರವನ್ನು ಸಂರಕ್ಷಿಸುವ ಕಾರ್ಯ ಮಾಡಬೇಕಿದೆ ಎಂದು ವೀರಾಜಪೇಟೆ ಜೆಎಂಎಫ್‍ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಡಿ.ಆರ್ ಜಯಪ್ರಕಾಶ್ ಹೇಳಿದರು.

ವೀರಾಜಪೇಟೆ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ತಾಲೂಕು ಆಡಳಿತ ಹಾಗೂ ಪಟ್ಟಣ ಪಂಚಾತಿಯಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿದ ಜಯಪ್ರಕಾಶ್ ಅವರು ಎಲ್ಲಾ ದಿನಾಚರಣೆಗಳು ನಮ್ಮ ಜವಾಬ್ದಾರಿಯನ್ನು ಮೆಲುಕು ಹಾಕುವಂತದ್ದು, ನಾವು ಕೇವಲ ಗಿಡಗಳನ್ನು ನೆಟ್ಟು ಸಭೆ ಸಮಾರಂಭಗಳಲ್ಲಿ ಭಾಗಿಯಾದರೆ ಸಾಲದು. ನೆಟ್ಟ ಗಿಡ ಮರಗಳನ್ನು ಸಂರಕ್ಷಿಸುವ ಕೆಲಸ ನಮ್ಮಿಂದಲೇ ಆಗಬೇಕು. ಕೇವಲ ಗಿಡ ನೆಡುವದು ಪರಿಸರ ರಕ್ಷಣೆ ಅಲ್ಲ. ಭೂಮಿಯ ಮೇಲಿರುವ ಹುಲ್ಲುಗಳನ್ನು ಕೂಡ ರಕ್ಷಿಸುವ ಕಾರ್ಯವನ್ನು ಮಾಡಿ ನಮ್ಮಲ್ಲಿರುವ ಅಜ್ಞಾನವನ್ನು ಹೋಗಲಾಡಿಸಬೇಕು ಎಂದು ಹೇಳಿದರು.

ವೀರಾಜಪೇಟೆ ವಿಭಾಗದ ಉಪ ಸಂರಕ್ಷಣಾಧಿಕಾರಿ ಮರಿಯಾ ಕ್ರಿಸ್ತುರಾಜು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಪರಿಸರ ಕಾಳಜಿ ಕೇವಲ ಒಂದು ಇಲಾಖೆಗೆ ಸಿಮೀತವಾದುದಲ್ಲ. ಪರಿಸರ ಸರಿ ಇಲ್ಲದಿದ್ದರೆ ಪ್ರಾಕೃತಿಕವಾಗಿ ನೀರಿನ ಮಟ್ಟ ಕುಸಿಯುತ್ತದೆ. ನಮ್ಮಿಂದಲೆ ನಿಯಂತ್ರಿಸಬಹುದಾಗಿದೆ. ಮನೆ ಯಿಂದ ಹೊರ ಹೋಗುವ ತ್ಯಾಜ್ಯವನ್ನು ನಾವೇ ಬೇರ್ಪಡಿಸಿ ಪರಿಸರದಲ್ಲಾಗುವ ಬದಲಾವu Éಗಳನ್ನು ತಪ್ಪಿಸಬಹು ದಾಗಿದೆ ಎಂದು ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಎಂ.ಎಂ.ನಂಜಪ್ಪ ಸಭೆಯನ್ನು ದ್ದೇಶಿಸಿ ಮಾತನಾಡಿ ದರು.

ವೇದಿಕೆಯಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶಿವಾನಂದ್ ಲಕ್ಷ್ಮಣ್ ಅಂಚಿ, ಅಪರ ಸಿವಿಲ್ ನ್ಯಾಯಾಧೀಶರಾದ ಬಿ.ಕೆ ಮನು, ವೀರಾಜಪೇಟೆ ತಹಶೀಲ್ದಾರ್ ಆರ್ ಗೋವಿಂದರಾಜು, ಮಾಜಿ ಅಧ್ಯಕ್ಷ ಎನ್,ಜಿ ಕಾಮತ್ ಉಪಸ್ಥಿತರಿದ್ದರು. ಶೀರಸ್ತೇದಾರ್ ಚಿಣ್ಣಪ್ಪ ಸ್ವಾಗತಿಸಿ ನಿರೂಪಿಸಿದರು, ರಾಧಾಕೃಷ್ಣ ವಂದಿಸಿದರು. ಸಮಾರಂಭಕ್ಕೆ ಮುನ್ನ ಅತಿಥಿಗಳು ಮಿನಿ ವಿಧಾನಸೌಧದ ಸುತ್ತ ಗಿಡಗಳನ್ನು ನೆಟ್ಟರು.