ಸಿದ್ದಾಪುರ, ಜೂ. 5: ಜೂನ್ 5 ಪರಿಸರ ದಿನಾಚರಣೆ ಎಂಬದು ಪ್ರತಿಯೊಬ್ಬ ನಾಗರಿಕನಿಗೂ ತಿಳಿದಿರುವ ವಿಚಾರ. ಆದರೆ ವಿಪರ್ಯಾಸವೆಂದರೆ ನೆಲ್ಯಹುದಿಕೇರಿ ಯಲ್ಲಿ ಹಾಗೂ ಸಿದ್ದಾಪುರ ವ್ಯಾಪ್ತಿಯಲ್ಲಿ ಯುವಕರ ಸಂಘಟನೆ ಗಳು ಸ್ವಚ್ಛತೆ, ಗಿಡನೆಡುವದರ ಮೂಲಕ ಪರಿಸರ ದಿನಾಚರಣೆ ಯನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದರೆ, ಇತ್ತ ಸಿದ್ದಾಪುರ ಹಾಗೂ ನೆಲ್ಯಹುದಿಕೇರಿ ಗ್ರಾ.ಪಂ.ಗಳು ಮಾತ್ರ ಇದ್ಯಾವದರ ಪರಿವೇ ಇಲ್ಲದಂತೆ ವರ್ತಿಸಿದ ಬಗ್ಗೆ ಸಾರ್ವಜನಿಕರಿಂದ ಅಸಮಾಧಾನ ವ್ಯಕ್ತವಾಯಿತು. ಮುಂಗಾರು ಮಳೆಯ ಚಳಿಯಲ್ಲಿ ಪಂಚಾಯಿತಿಗಳು ನಿದ್ರೆಗೆ ಜಾರಿವೆ ಎಂದು ಸಾರ್ವಜನಿಕರು ಟೀಕಿಸಿದರು.