* ಸಿದ್ದಾಪುರ, ಜೂ. 5: ಅರೆಭಾಷಿಕ ಗೌಡ ಜನಾಂಗ ಬಾಂಧವರು ನಡೆಸಿಕೊಂಡು ಬರುವ ಸಾಂಪ್ರದಾಯಿಕ ಹರಿಸೇವೆ ಕಾರ್ಯಕ್ರಮವನ್ನು ಅನ್ಯ ಜನಾಂಗದವರು ನೆರವೇರಿಸಿಕೊಂಡು ಬರುತ್ತಿದ್ದಾರೆ. ಆದರೆ ದಾಸಯ್ಯ ಎಂದೇ ಕರೆಯಲಾಗುವ ಇವರುಗಳು ಇತ್ತೀಚಿನ ದಿನಗಳಲ್ಲಿ ಈ ಕಾರ್ಯವನ್ನು ಕೈ ಬಿಟ್ಟಿದ್ದಾರೆ.
ಆದರೆ ಮಡಿಕೇರಿ ತಾಲೂಕಿನ ಬೆಟ್ಟತ್ತೂರು ನಿವಾಸಿ ದಿ. ಲಿಂಗಪ್ಪ ದಾಸ್ ಅವರ ಪುತ್ರ ನಾರಾಯಣ್ ದಾಸ್ ಮಾತ್ರ ಈ ಸೇವೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದು, ಜಿಲ್ಲೆಯ ಎಲ್ಲಾ ಭಾಗಗಳಲ್ಲಿ ಈ ಕಾರ್ಯ ನೆರವೇರಿಸುತ್ತಿದ್ದಾರೆ. ಇವರನ್ನು ಅಭ್ಯತ್‍ಮಂಗಲ ಗ್ರಾಮದ ಅಂಚೆಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಅಂಚೆಮನೆ ಪಟ್ಟೆದಾರರಾದ ಮಾದಪ್ಪ, ಗಣಪತಿ, ಕುಟ್ಟಪ್ಪ, ಗಣಪತಿ, ಪುಷ್ಪಾವತಿ, ಇನ್ನಿತರರಿದ್ದರು. ಅಂಚೆಮನೆ ಸುಧಿಕುಮಾರ್ ಸ್ವಾಗತಿಸಿ, ವಂದಿಸಿದರು.