ಕೂಡಿಗೆ, ಜೂ. 5 : ಹಾಸನ-ಕುಶಾಲನಗರ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ಹೆಚ್ಚಿದ್ದು, ಅಪಘಾತ ಸಂಭವಿಸುತ್ತಲೇ ಇರುತ್ತದೆ. ಸೋಮವಾರ ರಾತ್ರಿ ವಾಹನವೊಂದು ರಸ್ತೆಯ ಬದಿಯಲ್ಲಿ ಹೋಗುತ್ತಿದ್ದ ಹಸುವೊಂದಕ್ಕೆ ಡಿಕ್ಕಿ ಹೊಡೆದಿದ್ದು, ವಾಹನ ಚಾಲಕ ಪರಾರಿಯಾಗಿದ್ದಾನೆ. ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದ ಹಸು ಗಾಯಗೊಂಡು ಒದ್ದಾಡುತ್ತಿದ್ದ ಸಂದರ್ಭ ಕೂಡಿಗೆಯಿಂದ ಕೂಡ್ಲೂರಿನ ತಮ್ಮ ಮನೆಗೆ ತೆರಳುತ್ತಿದ್ದ ಪಶುವೈದ್ಯ ಗೋಪಾಲಕೃಷ್ಣ ಎಂಬವರು ಸ್ಥಳೀಯರ ಸಹಕಾರದೊಂದಿಗೆ ಹಸುವಿಗೆ ಚಿಕಿತ್ಸೆ ನೀಡುವದರ ಮೂಲಕ ಮಾನವೀಯತೆ ಮೆರೆದಿದ್ದಾರೆ. ನಂತರ ಸ್ಥಳೀಯ ಪ್ರಮುಖರಾದ ಶಶಿಕಿರಣ್, ಧರ್ಮ ಮೊದಲಾದವರು ಹಸುವನ್ನು ವಾರಸುದಾರರಿಗೆ ಒಪ್ಪಿಸಿದರು.