ಸೋಮವಾರಪೇಟೆ,ಜೂ.4: ವಿಧಾನ ಸಭಾ ಚುನಾವಣೆ ಸಂದರ್ಭ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇರೆ ಬಿಜೆಪಿಯಿಂದ 6 ವರ್ಷಗಳ ಕಾಲ ಅಮಾನತ್ತಾಗಿರುವ ಪದಾಧಿಕಾರಿಗಳ ಹುದ್ದೆಗೆ ನೂತನ ನೇಮಕ ಮಾಡಲಾಗಿದೆ ಎಂದು ಪಕ್ಷದ ಕ್ಷೇತ್ರ ಸಮಿತಿ ಅಧ್ಯಕ್ಷ ಎಂ.ಎನ್. ಕುಮಾರಪ್ಪ ತಿಳಿಸಿದ್ದಾರೆ.

ಪಕ್ಷದ ಸೋಮವಾರಪೇಟೆ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಮೋಹನ್ ದಾಸ್ ಅವರ ಬದಲಿಗೆ ಕೂಡು ಮಂಗಳೂರಿನ ಕೆ. ವರದ ಹಾಗೂ ಬಿಜೆಪಿ ತಾಲೂಕು ಯುವ ಮೋರ್ಚಾ ಅಧ್ಯಕ್ಷರಾಗಿದ್ದ ಮಹೇಶ್ ತಿಮ್ಮಯ್ಯ ಬದಲಿಗೆ ಗೌಡಳ್ಳಿ ಗ್ರಾಮದ ಜಿ.ಪಿ. ಸುನಿಲ್‍ಕುಮಾರ್ ಅವರುಗಳನ್ನು ನೇಮಕ ಮಾಡಲಾಗಿದೆ ಎಂದು ಕುಮಾರಪ್ಪ ಅವರು ತಿಳಿಸಿದ್ದಾರೆ.