ಗೋಣಿಕೊಪ್ಪ ವರದಿ, ಜೂ. 3: ಇಲ್ಲಿನ ಕಾವೇರಿ ಪದವಿ ಕಾಲೇಜು ಪ್ರಾಂಶುಪಾಲರಾಗಿದ್ದ ಪ್ರೊ. ಪಟ್ಟಡ ಎ. ಪೂವಣ್ಣ ನಿವೃತ್ತಿ ಹೊಂದಿದ್ದು, ನೂತನ ಪ್ರಾಂಶುಪಾಲರಾಗಿ ಪ್ರೊ. ಎಸ್.ಆರ್. ಉಷಾಲತ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಇವರು ಕಳೆದ 37 ವರ್ಷಗಳಿಂದ ವೀರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಹಾಗೂ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದರು.