ಸಿದ್ದಾಪುರ, ಜೂ. 3: ವೀರಾಜಪೇಟೆ ಅಂಚೆ ಕಚೇರಿ ಸೇರಿದಂತೆ ಜಿಲ್ಲೆಯ ವಿವಿಧೆಡೆಯ ಅಂಚೆ ಕಚೇರಿಗಳಲ್ಲಿ ಕಳೆದ 36 ವರ್ಷಗಳ ಕಾಲ ಸೇವೆ ಸಲ್ಲಿಸಿ, ವೀರಾಜಪೇಟೆಯ ಪೊಸ್ಟ್ ಮಾಸ್ಟರ್ ಆಗಿ ನಿವೃತ್ತಿ ಹೊಂದಿದ ಹೆಚ್.ಐ. ಗೋವಿಂದ ಅವರನ್ನು ಅಂಚೆ ಕಚೇರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸನ್ಮಾನಿಸಿ, ಬೀಳ್ಕೊಟ್ಟರು. ಗೌರವ ಸ್ವೀಕರಿಸಿ ಮಾತನಾಡಿದ ಗೋವಿಂದ, ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ತಾನು ಚಿರಋಣಿ ಎಂದರು. ತಮ್ಮ ಸೇವಾವಧಿಯಲ್ಲಿ ಸಹಕಾರ ನೀಡಿದವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಮುಖ್ಯ ಅಂಚೆ ಅಧೀಕ್ಷಕ ನಾಗೇಂದ್ರ, ವೀರಾಜಪೇಟೆ ಪೋಸ್ಟ್ ಮಾಸ್ಟರ್ ಕೃಷ್ಣಪ್ಪ, ಎಂ.ಎಸ್. ಮಂಜುನಾಥ್, ಸತೀಶ್, ಜಿ.ಎಂ. ಮಂಜುನಾಥ್, ಗಣಪತಿ, ಸುಬ್ರಮಣ್ಯ ಹಾಗೂ ಸಿಬ್ಬಂದಿಗಳು ಹಾಜರಿದ್ದರು.