ಸೋಮವಾರಪೇಟೆ, ಜೂ. 3: ಇಲ್ಲಿನ ಮಡಿಕೇರಿ ರಸ್ತೆಯಿಂದ ಮುಖ್ಯರಸ್ತೆಗೆ ತೆರಳುವ ಏಕಮುಖ ಸಂಚಾರ ರಸ್ತೆಯ ಬದಿಯಲ್ಲಿ ಚರಂಡಿಗೆ ಅಳವಡಿಸಿದ್ದ ಸ್ಲ್ಯಾಬ್ ತೆಗೆಯಲಾಗಿದ್ದು, ರಸ್ತೆ ಬದಿಯಲ್ಲಿಯೇ ಮೃತ್ಯುಕೂಪ ನಿರ್ಮಾಣವಾಗಿದೆ.

ಕರ್ನಾಟಕ ಬ್ಯಾಂಕ್, ಎಸ್.ಬಿ.ಐ., ಪಿಕಾರ್ಡ್ ಬ್ಯಾಂಕ್, ಜನೌಷಧ್ ಕೇಂದ್ರಗಳಿರುವ ಈ ರಸ್ತೆಯ ಬದಿಯಲ್ಲಿ ಅಳವಡಿಸಿದ್ದ ಸ್ಲ್ಯಾಬ್‍ನ್ನು ಕಳೆದೆರಡು ದಿನಗಳಿಂದ ತೆಗೆದಿದ್ದು, ನಂತರ ಮುಚ್ಚದೇ ಇರುವದರಿಂದ ಅಪಾಯಕ್ಕೆ ಎಡೆಮಾಡುತ್ತಿದೆ.

ಇಕ್ಕಟ್ಟಾಗಿರುವ ರಸ್ತೆಯಲ್ಲಿ ಒಂದು ವಾಹನವನ್ನು ಮತ್ತೊಂದು ವಾಹನ ಓವರ್‍ಟೇಕ್ ಮಾಡುವ ಸಂದರ್ಭ ಗುಂಡಿಗೆ ಬೀಳುವ ಸಾಧ್ಯತೆ ಅಧಿಕವಿದೆ. ಇದರೊಂದಿಗೆ ದಿನಂಪ್ರತಿ ಮಕ್ಕಳು, ಮಹಿಳೆಯರು, ವೃದ್ಧರು, ಸಾರ್ವಜನಿಕರು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಸಂಬಂಧಿಸಿದ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿಯವರು ಇತ್ತ ಗಮನ ಹರಿಸಿ ಸ್ಲ್ಯಾಬ್ ಅಳವಡಿಸಲು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ವರ್ತಕರು ಒತ್ತಾಯಿಸಿದ್ದಾರೆ.