ವೀರಾಜಪೇಟೆ, ಜೂ. 3 : ಮುಸ್ಲಿಮ್ ಒಕ್ಕೂಟದ ಆಶ್ರಯದಲ್ಲಿ ತಾ. 4 ರಂದು (ಇಂದು) ಸಂಜೆ 5:15ಗಂಟೆಗೆ ಖಾಸಗಿ ಬಸುನಿಲ್ದಾಣದ ಸಮೀಪದ ಡಿ.ಹೆಚ್.ಎಸ್.ಎನ್‍ಕ್ಲೇವ್ ಸಭಾಂಗಣದಲ್ಲಿ ಸೌಹಾರ್ದ ಇಫ್ತಾರ್‍ಕೂಟ ಏರ್ಪಡಿಸಲಾಗಿದೆ. ಅರಮೇರಿ ಶ್ರೀ ಕಳಂಚೇರಿ ಮಠದ ಶ್ರೀಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಯವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕಾವೇರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ:ಪಿ.ಎ.ಪೂವಣ್ಣ ಮುಖ್ಯ ಅತಿಥಿಗಳಾಗಿರುವುದು.ಜಮಾಅತೆ ಇಸ್ಲಾಮೀ ಹಿಂದ್ ಕರಾವಳಿ ವಲಯ ಸಂಚಾಲಕ ಅಕ್ಬರಲಿ ಉಡುಪಿಯವರು ರಮದಾನ್ ಸಂದೇಶ ನೀಡಲಿದ್ದಾರೆ.