ಸೋಮವಾರಪೇಟೆ, ಜೂ. 3: ಯಡವನಾಡು-ಯಡವಾರೆ ಮಾರ್ಗದಲ್ಲಿರುವ ಸಜ್ಜಳ್ಳಿ ಬಳಿ ಅರಣ್ಯದಲ್ಲಿರುವ ಮರವೊಂದು ಭಾರೀ ಗಾಳಿಗೆ ಬಾಗಿದ್ದು, ರಸ್ತೆಗೆ ಅಡ್ಡಲಾಗಿ ಬೀಳುವ ಸ್ಥಿತಿಯಲ್ಲಿದೆ.
ಈ ರಸ್ತೆಯಲ್ಲಿ ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರು, ವಾಹನಗಳು ಸಂಚರಿಸುತ್ತಿದ್ದು, ಯಾವ ಸಮಯದಲ್ಲಿ ಮರ ಬೀಳುವದೋ ಎಂಬ ಆತಂಕ ಮೂಡಿದೆ. ಅರಣ್ಯದಲ್ಲಿನ ಮರವಾಗಿರುವದರಿಂದ ಅದನ್ನು ತೆರವುಗೊಳಿಸಲು ಸ್ಥಳೀಯರು ಹಿಂದೇಟು ಹಾಕುತ್ತಿದ್ದು, ಅರಣ್ಯ ಇಲಾಖಾ ಸಿಬ್ಬಂದಿಗಳು ಇತ್ತ ಗಮನ ಹರಿಸಿ ಅಪಾಯಕಾರಿಯಾಗಿರುವ ಮರವನ್ನು ತೆರವುಗೊಳಿಸಲು ಕ್ರಮಕೈಗೊಳ್ಳುವಂತೆ ಪತ್ರಿಕೆ ಮೂಲಕ ಮನವಿ ಮಾಡಿದ್ದಾರೆ.