ಮಡಿಕೇರಿ, ಜೂ. 3: ಇದೀಗ ಜೆ.ಡಿ.ಎಸ್.- ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿರುವದರಿಂದ ಜೆ.ಡಿ.ಎಸ್. ಪಕ್ಷ ಕೊಡಗು ಜೆಲ್ಲೆಯ ಅಭಿವೃದ್ಧಿಗೆ ಮತ್ತು ಪಕ್ಷದ ಎಲ್ಲಾ ಮುಖಂಡರಿಗೆ ಸರಿಯಾದ ಸ್ಥಾನಮಾನ ನೀಡುವ ಬಗ್ಗೆ ಚರ್ಚೆ ನಡೆಸಲು ಜೆ.ಡಿ.ಎಸ್. ರಾಜ್ಯ ಮುಖಂಡ ಕಾರ್ಮಾಡು ಸುಬ್ಬಣ್ಣ ಅವರ ಅಧ್ಯಕ್ಷತೆಯಲ್ಲಿ ಸಂಪುಟ ರಚನೆ ಆದ ಬಳಿಕ ಸಭೆಯನ್ನು ಕರೆಯಲಾಗುವದು. ಜೆ.ಡಿ.ಎಸ್. ಪಕ್ಷವನ್ನು ಬೆಳೆಸಿದ ಎಲ್ಲಾ ಹಿರಿಯ ಮುಖಂಡರನ್ನು, ಕಾರ್ಯಕರ್ತರನ್ನು ಸಭೆಗೆ ಆಹ್ವಾನಿಸಲಾಗುವದು. ಕೊಡಗು ಜಿಲ್ಲೆಯ ಎಲ್ಲಾ ಮೂಲ ಜನತಾ ದಳದ ಮುಖಂಡರನ್ನು ಸಭೆಗೆ ಕರೆಯಲಾಗುವದು. ಸಭೆಯಲ್ಲಿ ಕೊಡಗಿನ ಎಲ್ಲಾ ಸಮಸ್ಯೆ ಬಗ್ಗೆ ಕಾರ್ಯ ಪ್ರವೃತ್ತರಾಗಲು ಗ್ರಾ.ಪಂ. ಮಟ್ಟದಿಂದ ಸಮಿತಿ ರಚನೆ ಮಾಡಲು ಚಿಂತನೆ ಮಾಡಲಾಗಿದೆ ಮತ್ತು ಪಕ್ಷದ ಎಲ್ಲಾ ಕಾರ್ಯಕರ್ತರ ಅಭಿಪ್ರಾಯವನ್ನು ಸಂಗ್ರಹಿಸಿ ಕುಮಾರಸ್ವಾಮಿ ಅವರಿಗೆ ರವಾನಿಸಲಾಗುವದು ಎಂದು ಜಿಲ್ಲಾ ವಕ್ತಾರ ಎಂ.ಟಿ. ಕಾರ್ಯಪ್ಪ ತಿಳಿಸಿದ್ದಾರೆ.