ಮಡಿಕೇರಿ, ಜೂ. 3: ದುಬೈ-ತಾಜುಲ್ ಉಲಮಾ ಬದ್ರಿಯಾ ಸುನ್ನಿ ಮದರಸ ಕಡಂಗ ಯುಎಇ ಶಾಖೆಯ ವತಿಯಿಂದ ಶಾರ್ಜಾದ ರೋಲ ದಲ್ಲಿ ಇಫ್ತಾರ್ ಕೂಟ ನಡೆಯಿತು.ಯುಎಇ ತಾಜುಲ್ ಉಲಮಾ ಬದ್ರಿಯಾ ಸುನ್ನಿ ಮದರಸ ಅಧ್ಯಕ್ಷ ಹಂಸ ಎಂ.ಎ. ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಜುಲ್ ಉಲಮಾ ಕೇಂದ್ರ ಕಮಿಟಿಯ ಮಾಜಿ ಅಧ್ಯಕ್ಷ ಜಲೀಲ್ ಸಖಾಫಿ ಉಸ್ತಾದ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಮತ್ತು ರಂಜಾóನ್ ಉಪವಾಸದ ಬಗ್ಗೆ ಮಾರ್ಗದರ್ಶನ ನೀಡಿದರು.

ಅನ್ವಾರುಲ್ ಹುದಾ ಸೆಂಟರ್‍ನ ಮುಹಮ್ಮದಲಿ ಉಸ್ತಾದ್ ಚಾಮಿಯಾಲ್ ಮಾತನಾಡಿ, ಕಾರ್ಯಕರ್ತರಿಗೆ ಸಂಘಟನೆಯ ಮಹತ್ವದ ಬಗ್ಗೆ ವಿವರಿಸಿದರು. ರಶೀದ್ ಅಶ್ರಫಿ ಸ್ವಾಗತಿಸಿದರೆ, ಮಜೀದ್ ಸಅದಿ ಕಾರ್ಯಕ್ರಮ ಉದ್ಘಾಟಿಸಿದರು. ತಾಜುಲ್ ಉಲಮಾ ಬದ್ರಿಯಾ ಸುನ್ನಿ ಮದರಸ ಯುಎಇ ಇದರ ಪ್ರಧಾನ ಕಾರ್ಯದರ್ಶಿ ಅಶ್ರಫ್ ಸಿ.ಎ. ಕಾರ್ಯಕ್ರಮ ನಿರೂಪಿಸಿದರು, ಸಂಯೋಜಕ ಮುಜೀಬ್ ಟಿ.ಕೆ. ವಂದಿಸಿದರು. ಸಹ ಕಾರ್ಯದರ್ಶಿ ನಾಸರ್ ಪಿ.ಎಂ. ಅಶ್ರಫ್ ಉಪಸ್ಥಿತರಿದ್ದರು.