ಮಡಿಕೇರಿ, ಜೂ. 3: ವೀರಾಜಪೇಟೆ ಕೊಡವ ಸಮಾಜದ ಅಧೀನದಲ್ಲಿ ನಡೆಯುತ್ತಿರುವ ತ್ರಿವೇಣಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಈ ಬಾರಿ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ಪಡೆದಂತಾಗಿದೆ.
ಈ ಹಿಂದೆ ಫಲಿತಾಂಶ ಪ್ರಕಟಗೊಂಡಿದ್ದ ಸಂದರ್ಭ ಓರ್ವ ವಿದ್ಯಾರ್ಥಿ ಅನುತ್ತೀರ್ಣನಾಗಿದ್ದು, ಫಲಿತಾಂಶ ಶೇ. 100 ಬಂದಿರಲಿಲ್ಲ. ಇದೀಗ ಮರು ಮೌಲ್ಯಮಾಪನದಲ್ಲಿ ವಿದ್ಯಾರ್ಥಿ ತೊತ್ತೆರ ಗಣಪತಿಗೆ ಹೆಚ್ಚುವರಿಯಾಗಿ ವಿಷಯವೊಂದರಲ್ಲಿ ಆರು ಅಂಕ ಬಂದಿದ್ದು, ಉತ್ತೀರ್ಣನಾಗುವ ಮೂಲಕ ಶಾಲೆಗೆ ಶೇ. 100 ಫಲಿತಾಂಶ ದೊರೆತಿದೆ ಎಂದು ಸಂಸ್ಥೆಯ ಅಧ್ಯಕ್ಷ ಚೆರ್‍ಮಂದಂಡ ನಾಣಯ್ಯ ಅವರು ತಿಳಿಸಿದ್ದಾರೆ.