ಗೋಣಿಕೊಪ್ಪ ವರದಿ, ಜೂ. 1 : ಕಾಡಾನೆಗಳ ಹಿಂಡಿನಿಂದ ಸುಮಾರು 500 ಕ್ಕೂ ಹೆಚ್ಚು ಗಿಡಗಳು ನಾಶವಾಗಿರುವ ಘಟನೆ ಮಾಯಮುಡಿ ಸಮೀಪದ ರುದ್ರಬೀಡು ಗ್ರಾಮದಲ್ಲಿ ನಡೆದಿದೆ. ತಿತಿಮತಿ ಆರ್‍ಆರ್‍ಟಿ ತಂಡದಿಂದ ಎರಡು ದಿನಗಳಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ.ಅಲ್ಲಿನ ಆಲೆಮಾಡ ಹರೀಶ್ ಕಾಫಿ ತೋಟದಲ್ಲಿ ಸೇರಿಕೊಂಡಿರುವ ಸುಮಾರು 16 ಕಾಡಾನೆಗಳು ತೋಟಗಳನ್ನು ಧ್ವಂಸ ಮಾಡಿವೆ. 2 ದಿನದಿಂದ ನಿರಂತರವಾಗಿ ನಾಶ ಮಾಡಿವೆ.ಕಾಫಿ ಬೆಳೆಗಾರ ಆಲೆಮಾಡ ಹರೀಶ್ ಎಂಬುವವರ 2 ಏಕ್ರೆ ಕಾಫಿ ತೋಟವನ್ನು ನಾಶ ಪಡಿಸಿವೆ. ಸುಮಾರು 500 ಕ್ಕೂ ಹೆಚ್ಚು ಗಿಡಗಳು ಆನೆಗಳಿಗೆ ಆಹಾರವಾಗಿದೆ. ತೋಟದಲ್ಲಿನ ಕಾಫಿ, ಕಾಳುಮೆಣಸು, ಬಾಳೆ, ತೆಂಗು, ಅಡಿಕೆ ಗಿಡಗಳನ್ನು ನಾಶ ಮಾಡಿವೆ. ನಷ್ಟ ಅನುಭವಿಸಿರುವ ಕಾಫಿ ಬೆಳೆಗಾರ ಹರೀಶ್ ಅವರು ಅರಣ್ಯ ಇಲಾಖೆಯವರ ಬಳಿ ಕಾಡಾನೆ ಗಳನ್ನು ತೋಟದಿಂದ ಕಾಡಿಗಟ್ಟಿ, ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.ತೋಟದಲ್ಲಿ ಬೆಳೆದು ನಿಂತಿದ್ದ ನೂರಾರು ಅಡಿಕೆ ಗಿಡಗಳನ್ನು ಆನೆಗಳು ತಿಂದು ಹಾಕಿವೆ. ಫಸಲು ಬರುತ್ತಿದ್ದ ಗಿಡಗಳು ನಾಶವಾಗಿರುವ ದರಿಂದ ಹೆಚ್ಚು ನಷ್ಟ ಉಂಟಾಗಿದೆ. ಬೆಲೆ ಕುಸಿತದ ನಡುವೆ ಗಿಡಗಳನ್ನೇ ಆನೆಗಳು ತಿಂದು ಹಾಕಿದರೆ ಬದುಕು ಹೇಗೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ತಿತಿಮತಿ ಆರ್‍ಎಫ್‍ಒ ಅಶೋಕ್,

(ಮೊದಲ ಪುಟದಿಂದ) ಫಾರೆಸ್ಟರ್ ಗಣಪತಿ ಹಾಗೂ ಆರ್‍ಆರ್‍ಟಿ ತಂಡದ ನಾಯಕ ಪೆಮ್ಮುಡಿಯಂಡ ಸಂಜು ಸಂತೋಷ್ ಭೇಟಿ ನೀಡಿ ಪರಿಶೀಲನೆ ನಡೆಸಿ ಆಗಿರುವ ನಷ್ಟದ ಬಗ್ಗೆ ಅಂದಾಜು ಪಟ್ಟಿ ಮಾಡಿದರು.

ಮುಂದುವರಿದ ಕಾರ್ಯಾಚರಣೆ

ರುದ್ರಬೀಡು ಗ್ರಾಮದಲ್ಲಿ ಸೇರಿಕೊಂಡಿರುವ 16 ಆನೆಗಳನ್ನು ಕಾಡಿಗಟ್ಟಲು ತಿತಿಮತಿ ಆರ್‍ಆರ್‍ಟಿ ತಂಡ ಎರಡು ದಿನಗಳಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ. ತಂಡಕ್ಕೆ ಆಲೆಮಾಡ ಹರೀಶ್ ಅವರ ಗದ್ದೆಯಲ್ಲಿ 16 ಆನೆಗಳ ದರ್ಶನ ವಾಗಿದೆ. 2 ದಿನಗಳಿಂದ ಸಂಜೆ ತೋಟಗಳಿಂದ ಕಾಡಿಗೆ ಅಟ್ಟಲು ಯೋಜನೆ ರೂಪಿಸಿದರು. ಸ್ಥಳಿಯ ವಿದ್ಯಾರ್ಥಿಗಳನ್ನು ಆರ್‍ಆರ್‍ಟಿ ತಂಡದ ವಾಹನಗಳಲ್ಲಿ ಮನೆಗೆ ಸೇರಿಸುವ ಕೆಲಸ ಮಾಡಲಾಯಿತು. ನಂತರ ಆನೆಗಳನ್ನು ಮಡಿಕೆಬೀಡು, ಮಾಯಮುಡಿ, ಅಂಬುಕೋಟೆ, ದೇವರಪುರ ಮಾರ್ಗದಲ್ಲಿ ಕಾಡಿ ಗಟ್ಟುವ ಪ್ರಯತ್ನ ನಡೆಸಲಾಗಿದೆ. ಕಾರ್ಯಾಚರಣೆಯಲ್ಲಿ ತಿತಿಮತಿ ಆರ್‍ಆರ್‍ಟಿ ತಂಡದ ನಾಯಕ ಸಂಜು ಸಂತೋಷ್, ದಿನೇಶ್, ವಿನಯ್, ಬೈರಾ ಪಾಲ್ಗೊಂಡಿದ್ದರು.

-ವರದಿ -ಸುದ್ದಿಪತ್ರ