ಸೋಮವಾರಪೇಟೆ, ಜೂ. 2: ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಸುರ್ವೆ ಕಲ್ಚರಲ್ ಅಕಾಡೆಮಿ ವತಿಯಿಂದ ನಡೆದ ರಾಷ್ಟ್ರಮಟ್ಟದ ಯೋಗ ಚಾಂಪಿಯನ್‍ಶಿಪ್‍ನಲ್ಲಿ ತಾಲೂಕಿನ ಕೂಡಿಗೆಯ ಏಂಜಲ್ ವಿದ್ಯಾನಿ ಕೇತನ ಶಾಲೆ, ಜ್ಞಾನೋದಯ ಶಾಲೆ, ಕುಶಾಲನಗರದ ಉದ್ಘಮ್ ಮಾಂಟೆಸರಿ ಶಾಲೆ ಹಾಗೂ ಕೊಡ್ಲಿಪೇಟೆಯ ಎಸ್‍ಕೆಎಸ್ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡು ರಾಷ್ಟ್ರೀಯ ವಿಭೂಷಣ ಪ್ರಶಸ್ತಿ ಪಡೆದಿದ್ದಾರೆ.
ನ್ಯಾಷನಲ್ ಇನ್ಸ್‍ಟಿಟ್ಯೂಟ್ ಆಫ್ ಮಾರ್ಷಲ್ ಆಟ್ರ್ಸ್ ಮತ್ತು ಯೋಗ ಸಂಸ್ಥೆಯ ಯೋಗ ತರಬೇತಿದಾರ ಪ್ರಮೋದ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದ ಅಜಿತ್, ಪಾರ್ಥ, ಐಸಿರಿ, ಗಾನಶ್ರೀ, ವೈಷ್ಣವಿ, ಮೋನಿಶಾ, ಶರಣ್ಯ, ನಮಿತ, ಗೌತಮಿ, ಅಪೂರ್ವ, ಅಪೇಕ್ಷ, ಗಣೇಶ್, ಅನಿಷಾ, ತುಂತುರು, ನೈದಿಲೆ, ಪಂಚಮಿ, ಶ್ರೇಯಾ, ತೇಜಸ್ವಿನಿ, ಕನ್ನಿಕಾ, ಜಗದೀಶ್, ಕಾವ್ಯ ಮತ್ತು ಸಚಿನ್ ಪಾಲ್ಗೊಂಡು ಪ್ರಶಸ್ತಿ ಪಡೆದಿದ್ದಾರೆ.